ನನ್ನ ಮನಸ್ಸು

05 May, 2014

ಒಲವಿನ ಆಹ್ವಾನ..


ಒಲವೇ,
ನಿನ್ನ ಲೋಕದಲಿ ಜಾತ್ರೆಯೇ ಇಂದು
ಕ್ಷಣಕ್ಕೊಮ್ಮೆ ಮಿಂಚಿ ಗುಡುಗಿ
ನಿದ್ದೆಯಿಂದೆಬ್ಬಿಸುವ ನಿನ್ನ ಡಂಗೂರ
ಪನ್ನೀರ ಸಿಂಚನ ಮೈಮನಕೆ
ಗವಾಕ್ಷಿಯಿಂದಲೇ ತೂರುವ ಮರುತ
ಕಪ್ಪಾಗಸದಿ ತುಂಬಾ ತೇಲುವ
ಬೆಳಕ ತೋರಣದ ರಂಗಮಂಟಪ
ಹೇಳು, ಚುಕ್ಕಿ ಚಂದಿರರ ಗರ್ಬಾ

ನೃತ್ಯಕೆ ಇದು ಇರಬಹುದೇ ಆಹ್ವಾನ!

2 comments:

  1. ತುಂಬಾ ಚನ್ನಾಗಿದೆ ನಿಮ್ಮ ಬರವಣಿಗೆ..!! ಇಸ್ಟೊಂದು ಚೆಂದನೆಯ ಸಾಲುಗಳನ್ನು ಹುಡುಕಿ, ನೆನೆದು, ರೂಪಿಸಿ ಬರೆಯುವುದು ನಿಜವಾಗಿಯೂ ಒಂದು ಸಹಸ. ನಿಮ್ಮ ಈ ಕುಶಲ ಕ್ರಿಯೆ'ಗೆ ನನ್ನ ಕಡೆ'ಇಂದ Hats' off !!
    ವರುಷಗಳ ಹಿಂದೆ ನಾ ಬರೆದ ಕೆಲವು ಪುಟಗಳು, ನಿಮ್ಮ ಒಲವಿನ ಸಾಲುಗಳಿಂದ ನೆನಪಾಗುತಿದೆ..!! ಧನ್ಯವಾದಗಳು..!!

    - ಅವಿನಾಶ್

    ReplyDelete
  2. :-) ನಮಸ್ತೆ ಅವಿನಾಶ್ ಅಗ್ನಿಹೋತ್ರಿ. ಇಂತಹ ಮೆಚ್ಚಿಗೆಗಳೆ ಮುಂದಿನ ಬರವಣಿಗೆಗೆ ಸ್ಫೂರ್ತಿ! ಮನಪೂರ್ವಕ ಧನ್ಯವಾದ!

    ReplyDelete