ನನ್ನ ಮನಸ್ಸು

18 November, 2013

ನಾ ಬಂಧಿಯೀಗ ಒಲವಿನ ದಿಗ್ಬಂಧನದಲಿ!



ಎಲ್ಲವನ್ನೂ ತಿಳಿದವನು ಮಾಯಾವಿ ನನ್ನೊಡೆಯ
ಜಾಲಬಂಧದಲಿ ಸಿಲುಕಿಸುವನು ಸತ್ ಆತ್ಮಗಳ
ಸ್ವಾರ್ಥ ಬಂಧವಿಲ್ಲವೀ ಒಲವಿನ ಜಾಲದಲಿ
ನೋಯಿಸುವ ಪಾತ್ರವಿಲ್ಲ ಒಲವಿನ ಲೋಕದಲಿ
ನಿಯಮ ವಿಮರ್ಶೆಗಳ ಗಡಿಯಿಲ್ಲವೀ ನಾಕದಲಿ!
ನಾ ಬಂಧಿಯೀಗ ಒಲವಿನ ದಿಗ್ಬಂಧನದಲಿ! 

No comments:

Post a Comment