ನನ್ನ ಮನಸ್ಸು

12 October, 2013

ಒಲವಿನ ಕೊಳದಲಿ ಮುಳುಗಿದೆ ನಾ..

ದೃಷ್ಟಿಯೊಮ್ಮೆ ಬದಲಿಸು
ಮಾಯಾ ಲೋಕದ
ನಿಸ್ಸಾರ ವಿಲಾಸದಿ
ಅಂದಂದಿತಲ್ಲವೆ ಒಲವು

ಬದುಕಿನ ಸಾರ್ಥಕತೆ
ಅಡಗಿದ ನನ್ನೀ
ಅನಂತ ಆಳವಾದ
ಕೊಳದಲಿ ಮುಳುಗೇಳು

ಆದೇಶ ದಿಕ್ಕರಿಸಲಾಗಲಿಲ್ಲ
ಆಳದಲಿ ಮುಳುಗಿ
ಹುದುಗಿಹೋದೆನಲ್ಲ
ಈಜಲು ಬಾರದೆಂಬುದ ಮರೆತು!

No comments:

Post a Comment