ನನ್ನ ಮನಸ್ಸು

20 September, 2013

ಭಾವವಿಲ್ಲದಿರೆ ಅವು ಬರೇ ಅಕ್ಷರವಂತೆ,,



ಒಲವೇ,
ನೋಡಂತೆ ತಲೆದೂಗುವರು ಅವರಿವರು
ನಿನಗೆ ಬರೆದ ಓಲೆಗಳನೋದಿ
ಅನಿಸುತದೆ ಬರೆಯುವೆನೆ ಒಮ್ಮೊಮ್ಮೆ
ನಿನಗಾಗಿ ಇಲ್ಲ ಅವರಿವರಿಗಾಗಿಯೇ..
ನಸುನಕ್ಕಿತು ಮನಸು, ಅಂದಿತು
ಬಿಡು ನೀನೀ ವಿಭ್ರಮೆ
ನಿನ್ನೀ ಭಾವಗಳ ಲೇಪವಿಲ್ಲದಿರೆ
ಅವು ಬರೇ ಅಕ್ಷರಗಳು

ಬರೇ ಅಕ್ಷರಗಳು ಮಾತ್ರ!

No comments:

Post a Comment