ನನ್ನ ಮನಸ್ಸು

08 August, 2013

ಮುಂಜಾವು ತರುವುದೇ ಹೊಸ ಭರವಸೆಯ ಬೆಳಕು!

ಮರುಳಯ್ಯ ಇದು ಎಂತ ಮರುಳು
ಜಗದ ಭಾವ ಕವಿಯುವ ಇರುಳು
ನೆನೆ ನೆನೆಯುತ್ತಾ  ಮಿಡಿಯುವ ಕರುಳು
||ಗೀಯ ಗೀಯ ರಾಗಿಯ ಗೀಯ||
||ಬಂದೇನಮ್ಮಿ ನಾ ಬಂದೇನಮ್ಮೀ||

ನೆಲೆಗಾಣದೆ ಅಲೆಯುತ್ತಾ ನಡೆಯುವ ಮರುಳು
ಬೆಳಕಲ್ಲೂ ಕತ್ತಲ ತೋರಿ ಹೆದರಿಸುವ ಹಗಲು
ಹಾದಿಯ ತುಂಬಾ ಹರಡಿದ ಭಾವಗಳ ಅಳಲು
||ಗೀಯ ಗೀಯ ರಾಗಿಯ ಗೀಯ||
||ಬಂದೇನಮ್ಮಿ ನಾ ಬಂದೇನಮ್ಮೀ||


ಮೂಢಿ, ಇಲ್ಲ ನಿನ್ನ ಮಾತಲಿ ಹುರುಳು
ಒಂದೇಟಿಗೆ ಹೊಡೆಯುವೆ ಕವಿದ ಗೆದ್ದಲು
ತುಂಬುವೆ ನಂಬಿದರೆ ಮನದಾಗಸದ ಬಟ್ಟಲು
||ಗೀಯ ಗೀಯ ರಾಗಿಯ ಗೀಯ||
||ಬಂದೇನಮ್ಮಿ ನಾ ಬಂದೇನಮ್ಮೀ||

-ಹಾಡಿ ಹಾಡಿ ಎಬ್ಬಿಸುವಳು ನನ್ನ ಮುಂಜಾವು!



-
ಜಯ ಜಯ... ನಿನಗೆ ಓ ಬೆಳಕಿನ ಚೆಂಡೇ...
ಹಾಡುತ ಲಕ್ಶ್ಮಿ ಬರಲು ಆತನ ಮುಖ ತುಂಬಾ ರಂಗು ಚೆಲ್ಲಿ ಮುಂಜಾವಿಗರ ಬರಹಗಳಲ್ಲಿ ಪ್ರತಿಬಿಂಬಿಸಿತು!
ಜಯಲಕ್ಷ್ಮಿಯವ ಕೋಲು ತೆಗೆದುಕೊಂಡು ಮುಗಿಲ ಮರೆಯಲ್ಲಿರುವ ಬಾಲರವಿಯನ್ನು ಕಿವಿಹಿಂಡಿ ಹೊರತಂದಿದ್ದಾರೆ..
ಹೀಗಿದೆ ನೋಡಿ!
ಕರಿಯಾನೆಗೆ ಹೆದರಿ 
ದೊಡ್ಡ ದನಿಗೆ ಹೆದರಿ 
ಮೂಡಿ ಮರೆಯಾಗೂವ 
ಚಾಬೂಕಿಗೆ ಹೆದರಿ 
ಅವ್ವನ ಉಡಿಯೊಳಗೆ 
ಅಡಗಿಕೊಳ್ಳುವ ಪುಟ್ಟ 
ಪೋರನಿವನ್ಯಾರೆ 
ಹೇಳವ್ವಾ ಕೋಲು ಕೋಲೆ

ರನ್ನs ಕಸಿಯಂಗಿ 
ಚಿನ್ನs ರುಂಬಾಲು 
ಮಾಣಿಕ್ಯದ ತಿಲಕವ 
ಧರಿಸಿ ಮೆರೆಯೂತ ಬಂದ 
ದೊರೆಯೀವನ್ಯಾರೆ 
ಹೇಳವ್ವಾ ಕೋಲು ಕೋಲೆ 

ನೀಲಿಯರಮನೆಯಿಂದ 
ಮೇಲೆಬಂದವನ್ಯಾರೆ 
ಕೆಂಪುಕೇಸರಿ ಅಂಗಿ 
ತೊಟ್ಟ ಫಿರಂಗಿ 
ಚುರುಕು ನಗೆಯ ಚೋರ 
ಚಲುವನಿವನ್ಯಾರೆ 
ಹೇಳವ್ವಾ ಕೋಲು ಕೋಲೆ 

ನಗುಮುಖದ ಚೆಲುವ 
ಮೂಲೋಕ ಅಲೆವ 
ಒಂದೊಂದೂ ಲೋಕದಲೂ 
ಬಣ್ಣ ಬದಲಿಸುವ 
ಆಟದವ ಇವನ್ಯಾರೆ 
ಹೇಳವ್ವಾ ಕೋಲು ಕೋಲೆ 

ಹತ್ತೂರು ಕರೆದರೂ 
ಓಗೊಡದ ಹಮ್ಮೀರ 
ನಾ ಬಂದು 'ಬಂಗಾರ' 
ಎಂದು ಕರೆದರೂ ಸಾಕು 
ಎದ್ದು ನಗುವ ಮಾರ 
ಹರಡ್ಯಾನೆ ಹೂನಗುವ 
ಕೇಳವ್ವಾ ಕೋಲು ಕೋಲೆ
.

No comments:

Post a Comment