ನನ್ನ ಮನಸ್ಸು

03 August, 2013

ಮನದ ಅಲೆದಾಟ!

ದಬ್ಬಿ ಹೊರಹಾಕಬೇಕು...
ಒಳಸೆಳೆಯಲೂ ತಿಣುಕಾಟ...
ಭಾವಗಳು ಕುತ್ತಿಗೆಯನು ಒತ್ತಿ..
ಎಷ್ಟೊಂದು ಕಾಡುವೆ ಪ್ರಾಣವಾಯುವೆ?
ಅಲ್ಲೆಲ್ಲಿಂದಲೋ ಕರೆ..
ಬಾ.. ಬಾ..
ಸಾಕಿನ್ನು ವ್ಯಾಮೋಹ..
ಮಣ್ಣ ಆಳದಲ್ಲಿ ಹುಗಿದ ಬೇರು
ತುಂಡರಿಸಲಾರದ ಸೋಲು
ಭುಜಗಳು ಹೊತ್ತ ಭಾರ..
ಕೆಳಗಿರಿಸಲಾಗದಲ್ಲ..
ಗುರಿಯ ಹಾದಿ ಮಬ್ಬಾಗಿ...
ಏನೂ ತೋಚದೆ ದಿಕ್ಕೆಟ್ಟ
ಮನದ ಅಲೆದಾಟ..


1 comment: