ನನ್ನ ಮನಸ್ಸು

05 July, 2012

ಪೂರೈಸುವೆಯಾ, ಶೈಲೇಶ!


ಅಂತರಂಗದ ತುಂಬಾ ನೀನೇ
ವ್ಯಾಪಿಸಿದೆಯಲ್ಲೋ ನನ್ನೀಶ!

ನಿನ್ನ ಪಾಡಿ ನಲಿಯುವ ಸುಖವ
ಮತ್ಯಾವುದರಲ್ಲೂ ನಾ ಕಾಣೆ, ಸರ್ವೇಶ!

ನಿನ್ನೊಡನೆ ಅಷ್ಟಿಷ್ಟು, ಇಷ್ಟಿಷ್ಟು 
ಆಡಿದರೂ  ಉಳಿಯುವುದಿಷ್ಟೋ ಶೇಷ!

ತಪ್ಪು ಒಪ್ಪುಗಳ ಹಂಗಿಲ್ಲೆನಗೆ
ಪಾಲಿಸುತ್ತಿರುವೆ ನಿನ್ನದೇ ಆದೇಶ!

ಆ ದಿವ್ಯ ಚರಣ ಸ್ಪರ್ಶಿಸುವಾಸೆ
ಪೂರೈಸುವೆಯಾ, ಶೈಲೇಶ!

3 comments:

  1. ಒಳ್ಳೆ ಹಾಡಿಕೊಳ್ಳಬಲ್ಲ ಕವನ ಕೊಟ್ಟಿದ್ದೀರಿ.

    ನಿಮ್ಮ ಭಕ್ತಿಯ ಮುಂದೆ ನಾವೆಲ್ಲ ಲವಲೇಷ!!!!

    ReplyDelete
  2. ಬದರಿ...ಶೀಲಾವ್ರು...ಲವ್-ಈಶಾ ಅಂದ್ರೆ ನೀವು ಲವ್-ಲೇಸಾ ಅಂತೀರಲ್ಲಾ.... ಚನ್ನಾಗಿದೆ ಶೀಲಾ ಕವನ ...

    ReplyDelete
  3. ಒಬ್ಬರು ಲವ-ಲೇಷ ಅಂದ್ರೆ ಮತ್ತೊಬ್ಬರು ಲವ್- ಲೇಸಾ ಅಂತೀರಲ್ಲ....ನಾನೇನ್ಮಾಡಬೇಕು???
    ಒಬ್ಬರು ಭಕ್ತಿ ನೋಡಿದ್ರೆ ಮತ್ತೊಬ್ಬರು ಲವ್ ನೋಡಿಬಿಟ್ರು...ಅಂತೂ ಬರೆದದ್ದು ಸಾರ್ಥಕ ಆಯ್ತಪ್ಪಾ!!!
    :-)))))

    ReplyDelete