ನನ್ನ ಮನಸ್ಸು

29 December, 2019

ಮಂಕುತಿಮ್ಮನ ಗೆರೆಗಳು-2

ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು।
ಸನ್ನಿವೇಶದ ಸೂಕ್ಷ್ಮವರಿತು ಧೃತಿದಳೆದು।।
ತನ್ನ ಕರ್ತವ್ಯ ಪರಧಿಯ ಮೀರದುಜ್ಜುಗಿಸೆ।
ಪುಣ್ಯಶಾಲಿಯ ಪಾಡು॥-ಮಂಕುತಿಮ್ಮ



ಮಂಕುತಿಮ್ಮನಿಗೊಂದಿಷ್ಟು ಗೆರೆಗಳು...

ತತ್ವಸಾಕ್ಷಾತ್ಕಾರ ಚಿತ್ತಶುದ್ದಿಯಿನಹುದು।
ಚಿತ್ತಶೋಧನೆ ಮತಿಚಮತ್ಕಾರವಲ್ಲ।|
ಬಿತ್ತರದ ಲೋಕಪರಿಪಾಕದಿಂ ಸತ್ಕರ್ಮ|
ಸಕ್ತಿಯಿಂ ಶುದ್ಧತೆಯೂ-ಮಂಕುತಿಮ್ಮ।


14 May, 2019

ಇದೇ ಆಗಸದಡಿ

ಒಲವೇ,
ನನ್ನ ಮುಗುಳ್ನಗೆ ಕಾಣುವುದೇ ನಿನಗೆ
ನಾವಿಬ್ಬರೂ ಈಗಲೂ ಇದೇ ಆಗಸದಡಿಯಲ್ಲೇ ಇದ್ದೇವಲ್ಲವೇ

ಮತ್ತೆ ಮರಳಿದೆ ಒಲವು

ಒಲವೇ,
ಒಂದಲ್ಲಒಂದುದಿನ
ಮರಳಲೇಬೇಕಲ್ಲವೇ
ಅಲ್ಲೇ ನನ್ನನಿನ್ನ
ಭೇಟಿಆಗದೇ