ನನ್ನ ಮನಸ್ಸು

01 June, 2018

ಪಥ..


ಒಲವೇ,
ನಿನ್ನದೀ ಪಥವು, ಕೇವಲ ನಿನ್ನದು
ಅವರಿವರು ಜತೆ ಕೊಡಬಹುದೇನೋ ಒಂದಿಷ್ಟು ದೂರ
ಕೈ ಹಿಡಿದು ಮತ್ತೊಂದಿಷ್ಟು ದೂರ..
ಕೊನೆಗೂ ನಿನ್ನ ಪಥ ನೀನೇ ಕ್ರಮಿಸಬೇಕು ನೋಡು!
-ರೂಮಿ (ಭಾವಾನುವಾದ)

ಜಿಂದಗಿ ಪ್ಯಾರಕಾ ಗೀತ ಹೈ!


ಜಿಂದಗಿ ಪ್ಯಾರಕಾ ಗೀತ ಹೈ!


ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು|
ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು|
ಈ ಬದುಕು ನೋವಿನ ಆಗರವು
ನಗುನಗುತಲೇ ಪಾಗರ ದಾಟಬೇಕು||


ಈ ಬದುಕೊಂದು ಅನುಭೂತಿ
ಭಗ್ನ ಮನಕೊಂದು ಆಶಾದೀಪ್ತಿ|
ಈ ಬದುಕೊಂದು ಅನುಭೂತಿ
ಭಗ್ನ ಮನಕೊಂದು ಆಶಾದೀಪ್ತಿ|
ಈ ಬದುಕೊಂದು ಪರವೂರು
ಕಾಲನಾಣತಿಯಂತೆ ಮರಳಲೇಬೇಕು||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಬೇಕು||

ಈ ಬದುಕಿಗೊಂದಿಷ್ಟೂ ನಿಷ್ಠೆಯಿಲ್ಲ ಆದರೂ ಏನಂತೆ
ನಮ್ಮವರೆಲ್ಲ ಆಗ್ರಹವನೆದುರಿಸುವೆನು ಛಲದಿಂದಲೇ|
ಈ ಬದುಕಿಗೊಂದಿಷ್ಟೂ ನಿಷ್ಠೆಯಿಲ್ಲ ಆದರೂ ಏನಂತೆ
ನಮ್ಮವರೆಲ್ಲ ಆಗ್ರಹವನೆದುರಿಸುವೆನು ಛಲದಿಂದಲೇ|
ನಮ್ಮಿಬ್ಬರ ಕೈಗಳು ಬೆಸೆಯದಿದ್ದರೇನಂತೆ
ಮನದ ಬೆಸುಗೆಗೆ ತಡೆಯಿಲ್ಲವಂತೆ||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು||

ಈ ಬದುಕೊಂದು ಮಂದಸ್ಮಿತೆಯಂತೆ
ನೋವಿನ ಅಸ್ಮಿತೆಯೂ ಹೌದಂತೆ|
ಈ ಬದುಕೊಂದು ಮಂದಸ್ಮಿತೆಯಂತೆ
ನೋವಿನ ಅಸ್ಮಿತೆಯೂ ಹೌದಂತೆ|
ಈ ಬದುಕೊಂದು ಅತಿಥಿಯಂತೆ
ಒಡೆಯನಿಗೆ ಮರಳಿ ಒಪ್ಪಿಸಲೇಬೇಕಂತೆ||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು||
ಈ ಬದುಕು ನೋವಿನ ಆಗರವು
ನಗುನಗುತಲೇ ಪಾಗರ ದಾಟಬೇಕು||