ನನ್ನ ಮನಸ್ಸು

31 May, 2018

ನೀ ಎದುರಾಗುವ, ಹಾಗೆಯೇ ಮರೆಯಾಗುವ ಘಳಿಗೆ!


ಒಲವೇ,

ಹೀಗೊಂದು ಥಟ್ಟನೆ ನೀನೆದುರಾಗುವ
ಹಾಗೆಯೇ ಮರೆಯಾಗುವ ಘಳಿಗೆ
ಕೈ ಮುಷ್ಟಿಯೊಳಗಿನ  ಮರಳಿನಂತೆ
ಕಣ್ತೆರೆದಂತೆ ಮಾಯವಾಗುವ ಕನಸಿನಂತೆ

ಸೆರೆ ಹಿಡಿಯಲು ಅಸಾಧ್ಯವನೋ…
ಬೆನ್ನಾಯಿಸಿ ನಿಟ್ಟುಸಿರು ಹೊರದೂಡುತ್ತ
ರೆಪ್ಪೆ ಮುಚ್ಚಿದರೆ ಮುಗುಳ್ನಗುವ
ನಿನ್ನ ವದನ ನನ್ನೆದುರಲ್ಲಿ…