ನನ್ನ ಮನಸ್ಸು

29 October, 2015

ಗಾಂಧಿ-ಆತ್ಮ ಕತೆಯಿಂದ...

ಕೈನಿಂದ ಕೆಟ್ಟದಾಗಿ ಬರೆಯುವುದನ್ನು ದೋಷಯುಕ್ತ ಶಿಕ್ಷಣದ ಗುರಿಯೆಂದು ಭಾವಿಸಬೇಕು. ಹೇಗೆ ಬರೆಯಬೇಕು ಎಂದು ಕಲಿಸುವಮುಂಚೆ ಮಕ್ಕಳಿಗೆ ಮೊದಲು ಚಿತ್ರ ಕಲೆಯನ್ನು ಕಳಿಸಿಕೊಡಬೇಕೆಂದು ನನ್ನ ಈಗಿನ ಅಭಿಪ್ರಾಯವಾಗಿದೆ. ಮಕ್ಕಳು ಬೇರೆಬೇರೆ ವಸ್ತುಗಳನ್ನು ಅಂದರೆ ಹೂವುಗಳು, ಪಕ್ಷಿಗಳು ಮುಂತಾದವನ್ನು ನೋಡುವಂತೆ ಅಕ್ಷರಗಳನ್ನು ಸೂಕ್ಷ್ಮವಾಗಿ ನೋಡಿ ಕಲಿಯಲಿ. ವಸ್ತುಗಳನ್ನು ಚಿತ್ರಿಸುವುದನ್ನು ಕಲಿತ ಮೇಲೆ ಮಗು ಕೈಬರಹವನ್ನು ಕಲಿಯಲಿ. ಆಗ ಮಗು ಸುಂದರವಾಗಿ ರೂಪು ಪಡೆದ ಕೈಯಿಂದ ಬರೆಯುವುದು.

-ನನ್ನ ಸತ್ಯಶೋಧನೆಯಲ್ಲಿ ಕಥೆ
(ಮೋಹನದಾಸನ ಕರಮಚಂದ್ ಗಾಂಧೀಯವರ ಕನ್ನಡ ಅನುವಾದ-ಜಿ.ಎಮ್.ಕೃಷ್ಣಮೂರ್ತಿ)

10 October, 2015

ಒಲವೆಳೆವ ಗೆರೆಗಳು!


ದಿಂಬಿಗೊರಗಿದ ಅವಳ ಮುಚ್ಚಿದ ಕಣ್ರೆಪ್ಪೆಯೊಳಗಿನ ಕೊಳ ಬಲು ಶುಭ್ರ

ಬೆಳದಿಂಗಳಲಿ ಕುಂಚವನದ್ದಿ ಒಲವೆಳೆವ ತೇಲುವ ಗೆರೆಗಳಲಿ ಆ ಬಿಂಬ ಭದ್ರ!

09 October, 2015

ಅವನ ಮಿಣುಕು ನೋಟವೇ ನನ್ನ ನಂದಾದೀಪ!

I seek the light only from YOU... So she says!

ಅವ
ವಿದ್ಯುತ್ ಮೊಬಲಗು ಕಟ್ಟಿರಲಿಲ್ಲವೋ ಅಥವಾ ಬೆಳಗಿನಿಂದ ಬೀಸಿ ಸುರಿದ ಗಾಳಿ-ಮಳೆಗೋ, ಇನ್ನೇನೋ ಕಾರಣವೋ.. ಮನೆಯಲ್ಲಿ ಹಚ್ಚಿಟ್ಟ ಮೊಂಬತ್ತಿಗಳು ಕಣ್ಣುಮುಚ್ಚಾಲೆಯಾಡುತ್ತಿದ್ದವು.
ಕತ್ತಲು ತುಂಬಿದ ಕೋಣೆಯ ಕಿಟಿಕಿಯ ಸರಳುಗಳಿಗೆ ಮುಖವೊತ್ತಿ ದೂರ ಆಗಸದತ್ತ ನೋಟ ಚೆಲ್ಲಿದ್ದಳು, ಅದ್ಯಾವುದೋ ನಿರೀಕ್ಷೆ ಕಪ್ಪು ಬಳಿದ ಕಣ್ಣುಗಳಲ್ಲಿ...
"ಅಲ್ಲೇನು ಕಿಟಿಕಿಯ ಬಳಿ ನಿಂತಿದ್ದಿಯೇ! ಬಾ, ಹಾಲು ಚೆಲ್ಲಿರುವ ಅಂಗಣದ ಚೆಲುವ ನೋಡು"
 'ಹ್ಮ್, ಇವರಿಗರಿವಾಗುವುದಾದರೂ ಹೇಗೆ,  ಅನತಿ ದೂರವಿರುವ ಆ ಚುಕ್ಕಿಯ ಮಿಣುಕು ನೋಟವೇ ನನ್ನ ಮನದ ಗುಡಿಯ ನಂದಾದೀಪ'

-ಅವಳ ಡೈರಿಯ ಪುಟಗಳಿಂದ