ನನ್ನ ಮನಸ್ಸು

17 September, 2013

हॊंटॊसे छूलो तुम मेरा गीत अमर करदो...



 ನಿನ್ನೀ ಅಧರದಿ ಸ್ಪರ್ಶಿಸು
ಅಮರವಾಗಲಿ ನನ್ನೀ ಹಾಡು ||
 ನೀ ಎನ್ನ ಇನಿಯಳಾಗು
ಅಮರವಾಗಲಿ ನನ್ನೀ ಒಲವು ||ಸ್ಪರ್ಶಿಸು||


ಒಲವು ಮೂಡಿದಾಗ ನಮ್ಮಲಿ
ಪ್ರಾಯದ ಸೀಮೆಯಿರದಿರಲಿ
ಜನುಮಗಳ ಬಂಧನವಿಲದಿರಲಿ
ಮನದಂಗಳದ ವೈಶಾಲ್ಯ ನೋಡು
ನವ ರೀತಿಯಲಿ ನಡೆದು ನೀನು
ಅಮರ ಮಾಡು ನಮ್ಮೊಲವನು ||



ನನ್ನೀ ಒಂಟಿ ಮನದಲಿ
ಮುಗಿಲ ಏಕಾಂತದ ನೋವು
ಗೆಜ್ಜೆ ನಾದವಾಡುತ್ತಲಿ 
ನನ್ನೀ ಬಾಳು ಬೆಳಗು
ಉಸಿರ ನೀಡಿ ಹಸುರು ಬೆಳೆಸಿ
ಅಮರಮಾಡು ನನ್ನೀ ಹಾಡನು ||




ಕಿತ್ತಿದೆ ನನ್ನಿಂದ ಈ ಜಗವು
ನನಗೆ ಪ್ರಿಯವಾದನ್ನೆಲ್ಲವನ್ನೂ
ಎಲ್ಲವನ್ನೂ ನನ್ನಿಂದ ಗೆಲ್ಲಲಾಯಿತು
 ಎಲ್ಲೆಲ್ಲೂ ಸೋತನಾದರೂ ನಾನು
ನಿನ್ನೀ ಮನವನ್ನು ನನಗೊಪ್ಪಿಸು
ಅಮರವಾಗಲಿ ನನ್ನೀ ಗೆಲುವು  || ಸ್ಪರ್ಶಿಸು ||








1 comment:

  1. ನನ್ನ ಇಷ್ಟದ ಗಜಲ್ ಅನ್ನು ಅಷ್ಟೇ ಭಾವಪೂರ್ಣವಾಗಿ ಅಭಿವ್ಯಕ್ತಿಗೊಳಿಸಿದ್ದೀರ.

    ವಂದನೆಗಳು
    ಶ್ರೀಕರ್

    ReplyDelete