ನನ್ನ ಮನಸ್ಸು

28 January, 2012

ಒಂದು ಆತ್ಮೀಯ ಕರೆಯೋಲೆ!



               

                        ಮಂಗಳೂರಿನ ಜನರಿಗೆ ತಿಂಗಳೊಂದಿನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿಯೋ ಸುಗ್ಗಿ! ಆಳ್ವರ ವಿರಾಸತ್, ಯುವಜನೋತ್ಸವ, ಬಾಲ ಸ್ರ‍ಜನೋತ್ಸವ, ವೀರ ವೆಂಕಟರಮಣನ ಪುನರ್‌ಪ್ರತಿಷ್ಟೋತ್ಸವ...ಮತ್ತೆ ಈಗ ವರ್ಣ ವನಿತ- ಎರಡು ದಿನಗಳ  ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ! ದಯವಿಟ್ಟು ನೀವು ನಿಮ್ಮ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಮಣ್ಣಗುಡ್ಡೆಯ ಇತ್ತೀಚಿಗೆ ನವೀಕರಿಸಿದ ಗಾಂಧಿ ಪಾರ್ಕಿಗೆ ಬಂದು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ. 
   
   ಕಾರ್ಯಕ್ರಮಗಳ ವಿವರ:-


      ಮಹಿಳಾ ಉದ್ಯಮಿ ವನಿತಾ ಜಿ ಪೈಯವರು ಫ಼ೆಬವರಿ ೩ ಶನಿವಾರದಂದು  ಉದ್ಘಾಟನೆ ಮಾಡಲಿದ್ದಾರೆ. ಸಬ್ ಇನ್‍ಸ್ಪೆಕ್ಟರ್ ಭಾರತಿ, ಉಪ ಮೇಯರ್ ಗೀತಾ ನಾಯಕ್, ವಿದ್ಯಾ ದಿನಕರ್ ಇವರೆಲ್ಲಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಫ಼ೆಬ್ರವರಿ ೫ರಂದು ಆದಿತ್ಯವಾರ ಮಧ್ಯಾಹ್ನ ೩ರಿಂದ ೩.೪೫ರ ವರೆಗೆ ನಯನಗೌರಿ     ಹರಿಕತೆ ನಡೆಸಿಕೊಡಲಿದ್ದಾರೆ. ಪ್ರಸಿದ್ಧ ಹಾಸ್ಯ ಬರಹಗಾರ್ತಿ ಭವನೇಶ್ವರಿ ದೇವಿ "ನಗು ಸೊಬಗು" ಎಂಬ ಹಾಸ್ಯ ಕಾರ್ಯಕ್ರಮವನ್ನು ೪ರಿಂದ ೪.೪೫ರ ವರೆಗೆ ನಡೆಸಿ ಕೊಡುವರು. ಎಮ್ ಆರ್ ಪಿ ಎಲ್‍ನ ಡಿಜಿಎಮ್ ಲಕ್ಷಿ ಕುಮಾರನ್ ಕಾರ್ಯಕ್ರಮ ಮುಕ್ತಾಯದ  ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬರಹಗಾರ್ತಿ ಚಂದ್ರಕಲಾ ನಂದಾವರ್, ಸಾಹಿತಿಗಳಾದ ಪರಮೇಶಿ ಲೋಕೇಶ್ವರ್, ಕೊಡಿಬೆಟ್ಟು ರಾಜಲಕ್ಷ್ಮಿ, ಮತ್ತು ಕಲಾವಿದೆ ಶಶಿ ವಿ ಶೆಟ್ಟಿಯವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
   ಚಿತ್ರ ಕಲಾವಿದರಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸಿ ತಮ್ಮ ಪ್ರತಿಭೆ ತೋರಲು ಚಿತ್ರಕಲಾ ಚಾವಡಿಯ ಸದಸ್ಯರಾದ ವೀಣಾ ಶ್ರೀನಿವಾಸ್, ಸಪ್ನಾ ನೊರೊಹ್ನ, ಆಶಾ ಶೆಟ್ಟಿ, ಸುಧಾ ನಾಯಕ್, ರೆಶ್ಮಾ ಶೆಟ್ಟಿ, ವಿದ್ಯಾ ಕಾಮತ್, ವೀಣಾ ಮಧುಸೂಧನ್, ರೇಣುಕಾ, ಲಕ್ಷ್ಮಿ ಬಿಜಿಲಿ, ನಿಶಾ ಬಂಗೆರ ಮತ್ತು  ಶೀಲಾ ನಾಯಕ್  ಬರುವರು.  ದಯವಿಟ್ಟು ತಾವೆಲ್ಲರೂ ಕುಟುಂಬ ಮತ್ತು ಮಿತ್ರ ಬಾಂಧವರೊಂದಿಗೆ ಹೆಚ್ಚಿನ ಸಂಖೆಯಲ್ಲಿ ಬಂದು ಕಲಾವಿದರಿಗೆ ಪ್ರೋತ್ಸಾಹ ಕೊಡಬೇಕೆಂದು ನಮ್ರತೆಯಿಂದ ವಿನಂತಿಸಿ ಕೊಳ್ಳುತ್ತೇನೆ.