ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

01 October, 2017

ಚಂದದ ಪದಗಳು...

The wonderful words
------------------------------

Never let a thought shrivel and die
For want of a way to say it
For English is a wonderful game
And all of you can play it.

All that you do is match the words
To the brightest thoughts in your head
So that they come out clear and true
And handsomely groomed and fed-
For many of the loveliest things
Have never yet been said.

Words are the food and dress of thought
They give its body and swing
And everyone’s longing today to hear
Some fresh and beautiful thing:
But only words can free a thought
From its prison behind your eyes
May be your mind is holding now
A marvellous new surprise!

-Mary O'Neill


ತಡೆಯಲಾಗಲಿಲ್ಲ ಈ ಕವನ ಕಣ್ಣಿಗೆ ಬಿದ್ದಾಗ, ಬರೆಸಿಯೇ ಬಿಟ್ಟಿತು ಭಾವಾನುವಾದ.

ಚಂದದ ಪದಗಳಾಗಿ ಹೊಮ್ಮಲಿ ಭಾವಗಳು!
------------------------------------

ಒಣಗಿ, ಮುದುಡಿ, ಗತವಾಗದಿರಲಿ ಭಾವಗಳು
ಹೇಗೆ ವ್ಯಕ್ತಪಡಿಸಲೆಂದು ಕಾಡದಿರಲಿ
ಅದ್ಭುತ ಪದಗಳಿವೆ ನಮ್ಮ ಭಾಷೆಯಲಿ
ಮತ್ತು ನೀನೊಮ್ಮೆ ಆಡಿ ನೋಡಂತೆ

ಹೊಂದಿಸಿ ನೋಡಂತೆ ಪದಗಳನು ಮತ್ತು
ನಿನ್ನೊಳಗಿನ ಅನುಭೂತಿಯನು ಒಂದಕ್ಕೊಂದು
ದಿಟ ಮತ್ತು ಸ್ಫುಟ ಭಾವ ಪದಗಳಲಿ ಪ್ರತಿಫಲನ
ಹೇಳದೆ ಉಳಿದು ಮನದೊಳಗೆ ಕಾಡುವ ಮಾತುಗಳು
ಸಿಂಗಾರಗೊಂಡು ಹೊರಡುವವು ಭಾವತುಂಬಿ

 ಪದಗಳು ಭಾವಗಳ ಗ್ರಾಸ, ಉಡುಗೆಯೂ
ಒಡಲಲಿ ತುಂಬಿ ಭಾವ ಓಲಾಟ ತೋರುವವು
ತವಕವಿದೆ ಎಲ್ಲರಿಗೂ ಎಲ್ಲರಿಂದಲೂ ಕೇಳಲಿ
ಚಂದ ಚೈತನ್ಯಭರಿತ ಮಾತುಗಳು

ಪದಗಳೇ ಬಿಡುಗಡೆ ನೀಡುವುದು
ಕಣ್ಣೊಳಗೆ ಕಟ್ಟಿಹಾಕಿದ ಭಾವಗಳಿಗೆ
ಭಾವವೊಂದು ಹುಟ್ಟಿರಬೇಕು ಮನದೊಳಗೆ
ಕೌತಕ, ಹೊಸ ಅಚ್ಚರಿಯನೀಯುವ!

28 September, 2017

ಒಲವೇ, ನಿನ್ನನರಿಯುವ ಯತ್ನದಲಿ...

ಒಲವೇ,

ನಿನ್ನರಿಯುವ ಯತ್ನದಲಿ ನಾ ನನ್ನರಿತೆ..
ನನ್ನೊಳಗಡಗಿರುವ ನಿನ್ನ ಬೆಂಬೆತ್ತಿದವಳ
ಒಳಮುಖ ನಡೆಯಲಿ ದಿವ್ಯಾನುಭವದ ಪ್ರಾಪ್ತಿ
ನೀನೇ ಪುಟವಿಟ್ಟ ಕನ್ನಡಿಯಲ್ಲಿ ಬಿಂಬ
ಈಗ ಎಲ್ಲವೂ ಸ್ಫುಟ ಮತ್ತು ಪರಿಶುದ್ಧ!

-ಪ್ರೇರಣೆ ರೂಮಿ

16 July, 2017

ಕಬೀರ-ದೋಹಾ! ಅನುವಾದ


ರಭಸದಿ ತಿರುಗುತಿದೆ ಬೀಸುಗಲ್ಲು, ಕಬೀರನ ಕಣ್ಣಲ್ಲಿ ನೀರು

ಅಯ್ಯೋ, ದ್ವಂದ್ವ ಚಕ್ರಗಳೆಯಡೆಯಲಿ ಬದುಕು ನುಚ್ಚುನೂರು!


ದಪ್ಪ ದಪ್ಪ ಗ್ರಂಥಗಳನು ಅರೆದು ಮಿದುಳಿಗೆ ತಿಕ್ಕಿದರೂ ಆಗಲಿಲ್ಲ ಪಂಡಿತ

ಅರಿತರೆ ಸಾಕಿತ್ತು, ಒಲವೆಂಬ ಮೂರು ಅಕ್ಷರಗಳ ಮಹಿಮೆ ಕಿಂಚಿತ್!

24 May, 2017

ಮತ್ತೆ ಮತ್ತೆ ಮಾರ್ದನಿಸುವೆ!

ಒಲವೇ,

ನನಗಿದರ ಅರಿವಿದೆ ಕಣೋ,
ನೀನೊಂದು ಮಹಾ ಪರ್ವತ
ಮತ್ತು ನಿನ್ನ ಕರೆದಾಗಲೆಲ್ಲ

ಮತ್ತೆ ಮತ್ತೆ ಮಾರ್ದನಿಸುವೆ!

ಒಲವು ಮತ್ತು ತಿರುವಿನ ಹಾದಿ!

ಒಲವೇ,
ತಿರುವಿನ ಹಾದಿಯಲಿ ನಾವು ಎದುರುಬದುರಾದೆವು
ನಮ್ಮ ಹೆಜ್ಜೆಗಳು ಸದ್ದಿಲ್ಲದೆ ಜತೆಗೂಡಿದವು.
ಅದೊಂದು ದಿನ ಹಾದಿ ಕವಲೊಡೆಯಿತು,

ಮತ್ತು  ಛಾಯೆಗಳು ಅಲ್ಲೇ ಉಳಿದವು!

22 May, 2017

ಮೊದಲ ಮಣ್ಣಿನ ಘಮಲು- ನಿನ್ನಿರುವಿನ ಸುಳಿವು!

ಒಲವೇ,
ಅಂದೊಮ್ಮೆ ಹುಡುಕುತ್ತ ನಿನ್ನ
ಅಲೆಯುತ್ತಿದೆ
ಹಾದಿ ಬೀದಿ, ತಿರುವು ಕವಲು
ಅರಸುತ್ತಿದ್ದೆ
ಬೆಟ್ಟ-ಗುಡ್ಡ,  ಗುಡಿ-ಗೋಪುರ
ಲೆಕ್ಕ ಮರೆತು ಹೋಗಿದೆ!
ತಿರುವಿ ಹಾಕಿದ ಹೊತ್ತಗೆಗಳ ಪುಟಗಳು,
ಆಲಿಸಿದ ಮಸ್ತಕಗಳ ಮಾತುಗಳು;
ಸೋತು ಕೈ ಚೆಲ್ಲಿ ಕುಳಿತ
ನನ್ನ ನಾಸಿಕದೊಳಗೆ ನುಸುಳಿದ
ಆಗ ತಾನೆ ಸುರಿದ ಮಳೆಗೆ
ಆರ್ದ್ರವಾದ ಮಣ್ಣಿನ ಘಮಲು
ಅದೇ ನಿನ್ನಿರುವಿನ ಸುಳಿವು!



ಇರಲಿ ಹೀಗೆ ಅನುರಾಗದ ಹೊನಲು!

ಒಲವೇ,

ತಿಳಿದಿರುವವರು ಹೇಳುತ್ತಿರುವರು
ಮುಗಿಯದ ಹಾದಿಯಂತೆ ಈ ಬದುಕು
ಆದರೇನಂತೆ
ಕೊನೆಯ ತನಕ ಇರಲು
ನಿನ್ನೀ ಅನುರಾಗದ ಹೊನಲು!

19 May, 2017

ಬಾಲ್ಕನಿ ಸರಣಿ ಚಿತ್ರಗಳು..


ನೋವು-ನಲಿವು ಮತ್ತು ಒಲವು!

ಒಲವೇ,

ಯಾಕೀ ನೋವು ಈ ಪರಿತಾಪ
ನಿನಗಿಲ್ಲವೇಕೆ ಒಂದಿಷ್ಟು ಸಂತಾಪ!
ನನ್ನ ಪ್ರಲಾಪಕೆ ನಗುಮೊಗದುತ್ತರ..
“ನೋವಿನ ಅನುಭೂತಿ ಇರದ
ನಲಿವಿಗೆ ಕಾಸಿನ ಬೆಲೆಯಿಲ್ಲ;
ಗಾಯಗಳು ಸೋರದೇ ಕೀವಾಗದೇ
ನಿನ್ನೊಳಗಿನ ನನ್ನಿರುವು ಅರಿವಾಗುವುದೇ!”

ಬಿರುಕಿರದೆ ಸಾಗುವುದ್ಹೇಗೆ
ನನ್ನ ಬೆಳಕಿನ ರೇಖೆಗಳು ನಿನ್ನೊಳಗೆ!”


ಒಲವೇ,

ನೋವಿನ ಅನುಭೂತಿ ಇರದ

ನಲಿವಿಗೆ ಕಾಸಿನಷ್ಟು ಬೆಲೆಯಿಲ್ಲ;

ಗಾಯಗಳು ಸೋರದೇ ಕೀವಾಗದೇ

ನನ್ನೊಳಗಿನ ನಿನ್ನಿರುವು ಅರಿವಾಗುವುದೇ,

ಬಿರುಕಿರದೆ ಸಾಗುವುದ್ಹೇಗೆ

ಬೆಳಕಿನ ರೇಖೆಗಳು ನನ್ನೊಳಗೆ!








18 May, 2017

ಬೊಗಸೆ ತುಂಬ ಪಾರಿಜಾತ ಗಂಧ!

ಒಲವೇ,


ಹ್ಮ್, ನನಗೇನೂ ನೆನಪಾಗುತ್ತಿಲ್ಲವಲ್ಲ
ನನ್ನೊಲವೇ ಅದ್ಹೇಗೆ, ಅದ್ಯಾವಾಗ
ನನಗಿಷ್ಟು ನೀನಾದೆ ಸುಪರಿಚಿತ


ನೆನಪಿಸಿಕೊಳ್ಳಲು ಮನದಾಳಕೆ
ಇಳಿದ ಹಾಗೆ ಮತ್ತಿಷ್ಟು ಹತ್ತಿರ
ನಿನ್ನೀ ನಸುನಗೆ, ಬಿರುನಗೆ
ನಿನ್ನೀ ಪಿಸುನುಡಿ,  ಆಲಾಪ
ಯಾವೂದೂ ಅಪರಿಚಿತವಲ್ಲ


ಮತ್ಯಾವುದೋ ಜನುಮದ ಪಳೆಯುಳಿಕೆ
ಸುಮ್ಮನೇ ನಸು ನಗುತ್ತೇನೆ
ಬೊಗಸೆ ತುಂಬಾ ಪಾರಿಜಾತ ಗಂಧ!



ಸುಭಾಷಿತ- ಅನುವಾದ

ವಿದ್ಯಾ ವಿವಾದಾಯ ಧನಂ ಮುದಾಯ
ಖಲಸ್ಯ ಶಕ್ತಿಃ ಪರಪೀಡನಾಯ|
ಸಾಧೋಸ್ತು ಸರ್ವಂ ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ||
ಒಲವೇ,
ವಿದ್ಯೆ ಅರಸನಂತೆ ಮೆರೆಯಲು,
ಧನ ಸರಿ-ಸಮಾನರಿಲ್ಲವೆಂದು ತೋರಲು,
ಪರರ ಹೀಗಳೆಯಲೇ ಖಳನ ಸಾಮರ್ಥ್ಯವೆಲ್ಲವೂ!
ಇದಕೆ ವಿಪರೀತವು ಸಜ್ಜನರ ನಡೆಯು
ಅರಿವು ಬೆಳೆಸಲು ಮತ್ತು  ಬೆಳೆಯಲು
ಸಂಪತ್ತು ಪರರ ಕಣ್ಣೊರಸಲು
ಶಕ್ತಿ ತನ್ನವರನು ಭದ್ರವಾಗಿಡಲು!



,



ಸಣ್ಣ ಕ್ಯಾನ್ವಾಸ್.. ಚಿತ್ರಕಲೆ!


17 May, 2017

ಮಿನಿ ಕಾನ್ವಾಸ್!



ಮತ್ತೆ ಒಲವು ಅಕ್ಷರದ ರೂಪದಲ್ಲಿ...

ಒಲವೇ,
ನಾ ಹಾರಬಲ್ಲೆ
ಅನಂತದಷ್ಟು ಎತ್ತರ
ನೀನಂದಂತೆ ಇಲ್ಲವೀಗ
ನಮ್ಮಿಬ್ಬರ ಮಧ್ಯೆ

ಒಂದಿನಿತೂ ಅಂತರ!

ಒಲವೇ,
ಒಪ್ಪಿದೆ, ನೀನನ್ನುವಂತೆ ಹಣತೆಯೊಂದು
ಮತ್ತೊಂದು ಹಣತೆಯನ್ನು ಬೆಳಗಿದರೆ ಬೆಳಕಿನ ವ್ಯಾಪ್ತಿಗೆ ಎಣೆಯಿಲ್ಲ !

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...