ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 April, 2016

ಶ್ರೀರಾಮ ನವಮಿ

||ಭರ್ಜನಮ್ ಭವಬೀಜಾನಾಮ್, ಅರ್ಜನಮ್ ಸುಖಸಂಪದಾಮ್, ತರ್ಜನಮ್ ಯಮದೂತಾನಾಮ್ ರಾಮ ರಾಮೇತಿ ಗರ್ಜನಮ್||

ಕಲೆಯ ಉದ್ದೇಶ ಒಂದು ವಸ್ತುವಿನ ಹೊರಗಿನ ಸ್ವರೂಪವನ್ನು ತೋರಿಸುವುದು ಅಲ್ಲ. ಒಳಗಿನ ಮಹತ್ವವನ್ನು ಮನಗಾಣಿಸುವುದು!
_ಅರಿಸ್ಟಾಟಲ್
ಈ ಗೆರೆಗಳು ಜಾನಕಿ ಮತ್ತು ರಾಮನ ಪರಿಣಯ ಪ್ರತಿನಿಧಿಸುವುದು ಹೌದಾದರೂ ರಾಮನು ಮೊಣಕಾಲೂರಿ ನಿಂತದ್ದು ಆತ ಜಾನಕಿಗೆ ಕೊಡುವ ಮಾನ.. ಮತ್ತು ವಿನೀತನಾಗಿ ಅವಳ ಕೈ ಕೇಳುವುದನ್ನೂ ಸೂಚಿಸುತ್ತದೆ. ರಾಮ ತನ್ನ ಸಹಚರ್ಯೆಗೆ ಕೊಡುವ ಮಹತ್ವದ ಸ್ಥಾನವನ್ನೂ ಸಹ. ಮತ್ತು ಇದೇ ನನ್ನ ಮನದ ಮಾತೂ.

31 March, 2016

22 March, 2016

ಶಿಷ್ಯಳ ಕೈಚಳಕ..


14 March, 2016

07 March, 2016

ಸತ್ಯಮ್ ಶಿವಮ್ ಸುಂದರಂ


ಓಂ ಶ್ರೀದಾಮೋದರಾಯ ನಮಃ

ಮಹಾಶಿವನ ಅವತಾರ, ನಮ್ಮ ಕುಲದೇವತೆ ಶ್ರೀ ದಾಮೋದರ.

03 March, 2016

||ರಾಧಾಕೃಷ್ಣ||


15 February, 2016

ಒಲವು

ಒಲವು ಅತಿಕ್ರಮಿಸುವುದಿಲ್ಲ, ಆಕ್ರಮಿಸುವುದಿಲ್ಲ;
ಶರಣಾಗುತ್ತದೆ.

ಒಲವು ಬೇಡುವುದಿಲ್ಲ, ಕಾಡುವುದಿಲ್ಲ;
ಪ್ರಾರ್ಥಿಸುತ್ತದೆ.

ಒಲವು

ಲೌಕಿಕ ಬದುಕಿಗೊಂದು ಆಧ್ಯಾತ್ಮಿಕ ಚೌಕಟ್ಟು-ಒಲವು

14 February, 2016

ಬುವಿಗಿಳಿಯುವ ಒಲವಿನ ಸಂದೇಶ..
 ಆ ಶ್ವೇತ ರಂಗಿನ ಎಸಳುಗಳ ಕೊನೆಯಲಿ ಸೇರುವ ಕೇಸರಿ ರಂಗಿನ ಡಬ್ಬಿಯ ಜೇನಿನಲಿ ಒಂದಿಷ್ಟು ಅನುರಾಗ, ಒಂದಿಷ್ಟು ಧೀ ಶಕ್ತಿ, ಒಂದಿಷ್ಟು ಸಾಂತ್ವನ,  ಒಂದಿಷ್ಟು ಸಹಿಷ್ಣುತೆ... ತುಂಬಿ ಬುವಿಗಿಳಿಯುವ ನನ್ನೊಲವಿನ ಸಂದೇಶ


10 February, 2016

ಯೋಗ, ಯೋಗ್ಯತೆ ಇದ್ದರೆ ಮಾತ್ರ ಒಲವಿನ ಧಾರೆ...

Never except, never assume,
Never ask, and never demand.
Just let it's be.
Because if it's meant to be,
It will be.
-anonymous

ಒಲವೇ,
 ಹ್ಮ್..
ಕೇಳದೇ, ಬೇಡದೇ
ನೀ ಸುರಿವ ಒಲವ
ಧಾರೆಗೆ ಒದ್ದೆಯಾಗುವ
ಸುಖ ಬಲ್ಲೆನಲ್ಲ...

ಹಾಗೆಯೇ ಅಪರಿಚಿತನಂತೆ
ಅಸ್ತಿತ್ವದ ಅರಿವೇ ಇಲ್ಲದಂತೆ
ಮರೆಯಾಗುವ ಪರಿಗೂ
ನಾ ಬೆರಗಾಗುವುದಿಲ್ಲವಲ್ಲ...

(ಕೆಲವು ದಿನಗಳಿಂದ ಕಾಣಿಸದ ನನ್ನ ಬೆಕ್ಕು ಮಹಾರಾಣಿಯ ನೆನಪಲ್ಲಿ)

19 January, 2016

ಬೆಳೆಯುವ ಬೆಳದಿಂಗಳು, ಒಲವು

ಒಲವೇ,
ಕಟು ನುಡಿಗಳ ನೋವು
ಸುಲಭದಲಿ ಅರಗಿಸಲಾಗದು..
ನಿಜ, ಅಲ್ಲಗಳೆಯುವುದಿಲ್ಲ ನಾನು
ಹಾಗಂತ ಅದು ನಮ್ಮೊಳಗೆ ಬೆಳೆಯುವ ಬೆಳದಿಂಗಳಿಗೆಂದೂ ಅಡ್ಡಿಯಾಗದು.
ಕಣ್ಣು ಮಿಟುಕಿಸದೇ ನನ್ನನ್ನು ನೋಡುತ್ತಿದ್ದವಳು
ಚರ್ಚೆ ಮಾಡದೇ ಒಪ್ಪಿಕೊಂಡಳು.
ನನಗಚ್ಚರಿಯಾಗಲೇ ಇಲ್ಲ ನೋಡು!

17 January, 2016

ಸುಧೀಂದ್ರ ತೀರ್ಥ ಮಹಾರಾಜ... ಭಾವಪೂರ್ಣ ಶ್ರದ್ಧಾಂಜಲಿ!

ಪರಮ ಆತ್ಮದಲಿ ಲೀನವಾದ ದಿವ್ಯ ಆತ್ಮ..
ಗೆರೆಗಳ ನಮನ ಗುರುಮಹಾರಾಜ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...