ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 August, 2015

||ವಿನಾಶ ಕಾಲೇ ವಿಪರೀತ ಬುದ್ಧಿಃ||

ಪೌಲಸ್ತ್ಯಃ ಕಥಮನ್ಯದಾರಹರಣೆ ದೋಷಂ ನ ವಿಜ್ಞಾತವಾನ್
ರಾಮೇಣಾಪಿ ಕಥಂ ನ ಹೇಮಹರಿಣಸ್ಯಾಸಂಭವೋsಲಕ್ಷಿತಃ|
ಅಕ್ಷೈಶ್ಚಾಪಿ ಯುಧಿಷ್ಠಿರೇಣ ಸಹಸಾ ಪ್ರಾಪ್ತೋ ಹಯನರ್ಥಃ ಕಥಮ್
ಪ್ರತ್ಯಾಸನ್ನವಿಪತ್ತಿಮೂಢಮನಸಾಂ ಪ್ರಾಯೋ ಮತಿಃ ಕ್ಷೀಯತೆ||
-ಪಂಚತಂತ್ರ
ಕಠಿಣ ತಪಗೈದು ಶಿವನನ್ನೇ ಒಲಿಸಿದ ಪೌಲಸ್ತ್ಯನು ಪರಪತ್ನಿಯನ್ನು ಅಪಹರಿಸುವಂತ ನೀಚ ಕಾರ್ಯ ಮಾಡಿದನೇಕೆ,
ಸುವರ್ಣ ಚಿಂಕೆಯೆಂಬುವುದಿಲ್ಲವೆಂದು ರಾಮನಿಗೆ ಅರಿವಾಗಲಿಲ್ಲ ಅದೇಕೆ,
ದ್ಯೂತವು ಕಷ್ಟಗಳ ಸಾಗರವನ್ನೇ ಹೊತ್ತುತರುವುದೆಂಬ ವಿವೇಕ ಯುಧಿಷ್ಠಿರನಿಗೆ ಇರಲಿಲ್ಲವೇಕೆ,
ಪ್ರಾಯಃ ವಿಧಿಯ ಕಪಿಮುಷ್ಠಿಯಲ್ಲಿ ಸಿಲುಕಿದರೆ ಇಂದ್ರಿಯಗಳು ಮಂಕಾಗಿ ಬುದ್ಧಿ ಬಲಹೀನವಾಗುತ್ತದೆ!

-ಪಂಚತಂತ್ರ

28 August, 2015

ಸತ್ಯ ದರ್ಶನ!


    ಮನುಷ್ಯನ ದುಃಖಕ್ಕೆ ಮೂಲ ಕಾರಣ ಆತನ ಕ್ಷುದ್ರ ಬಯಕೆಗಳು. ತನ್ನ ಬಯಕೆ ಈಡೇರದೇ ಇದ್ದಾಗ  ದುಃಖ ಕೋಪ ಇತ್ಯಾದಿ ಆರಂಭವಾಗುತ್ತದೆ. ಇದರಿಂದ ಆತ ತನ್ನ ಜೀವನವನ್ನು, ಬಂಧು ಮಿತ್ರರ ಜೀವನವನ್ನೂ ನರಕವನ್ನಾಗಿ ಮಾಡುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನಿಗೆ ತನ್ನೊಳಗಿರುವ ಅಪೂರ್ವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ.
    ಸ್ಥಿತಪ್ರಜ್ಞನಾದವನು ಈ ಜಂಜಾಟದಲ್ಲಿ ಸಿಲುಕದೇ, ತನ್ನಂತರಂಗದಲ್ಲಿನ ಆ ಮಹದಾನಂದವನ್ನು ಸದಾ ಸವಿಯುತ್ತಾ ಸಂತೋಷವಾಗಿರುತ್ತಾನೆ. ಆತ ಕಾಮನೆಗಳಿಗೆ ಬೆಂಬೀಳುವುದಿಲ್ಲ. ಬೇಕು ಎನ್ನುವ ಬಯಕೆ ಆತನನ್ನು ಕಾಡುವುದಿಲ್ಲ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಆತ ಉದ್ವೇಗಕ್ಕೆ ಒಳಗಾಗುವುದಿಲ್ಲ. ಆತನ ಮನಸ್ಸು ಗಟ್ಟಿಯಾಗಿರುತ್ತದೆ ಮತ್ತು ಇದರಿಂದ ಆತ ಯಶಸ್ಸನ್ನು ಕಾಣಬಲ್ಲ.
-ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ

ಹಾಳು ಮೋಹ.. ಬುದ್ಧಿ ಮಂಕು!

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ|
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋsಭಿಜಾಯತೇ||

ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ|
ಸ್ಮೃತಿಭ್ರಂಶಾತ್ ಬುದ್ಧಿನಾಶೋ ಬುದ್ಧಿನಾಶಾತ್ ವಿನಶ್ಯತಿ||

||ವಿಷಯಗಳನ್ನೇ ನೆನೆಯುತ್ತಿರುವ ಮನುಷ್ಯನಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
ರೊಚ್ಚಿನಿಂದ ಮಾಡಬಾರದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂತಹ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ||


-ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ

22 August, 2015

ಅವನೊಲವಿನ ಭಾವದಲಿ ನಾನು ಪರವಶ!

ಚುಕ್ಕಿಗಳು ಕಪ್ಪುಕುಳಿಯಕ್ಕಾಳಕ್ಕಿಳಿದು ಮಾಯವಾಗಿ,
ಕತ್ತಲೆಯ ಕರಾಳ ಬಾಹು ಚಂದ್ರಮನ ನುಂಗಿ,
ನಭವು ಸೂತಕದಾಚರಣೆಯಲಿರುವ ತನಕ
ನಾನು ಅವನೊಲವಿನ ಭಾವದಲೇ ಪರವಶ.


-      ಪ್ರೇರಣೆ  ಡಬ್ಲ್ಯು ಬಿ ಯೀಟ್ಸ್ ಅವರ ಕವನ!

ನೋವುಗಳ ನಿವಾರಣೆಯ ಹೊಣೆ ನಿನ್ನದೇ, ಒಲವೇ!

ಏ ಮಾಲಿಕ್, ತೆರೆ ಬಂದೆ ಹಮ್..

ಒಲವೇ,
ಚಂಚಲ ಚಿತ್ತನೀ ಮರ್ತ್ಯ,
ಜತೆಗೆ ನೂರಾರು ನ್ಯೂನತೆಗಳು..
ಆದರೂ ನಿನ್ನೀ ಸಾಮಿಪ್ಯ,
ಸದಾ ತೋರುವ  ಅನುಕಂಪ,
ಅನುರಾಗ ತುಂಬಿದೆ ಇಲ್ಲಿ,
ಇಳೆಯ ಬೆಚ್ಚಗಿನ ಮಡಲಲ್ಲಿ;
ಉಸಿರಿತ್ತಾಗಲೇ ಬೊಗಸೆ
ತುಂಬಾ ಉಡುಗೊರೆ
ಮತ್ತಿನ್ನೇನು,
ನೋವುಗಳ ನಿವಾರಣೆಯೂ
ನಿನ್ನದೇ ಹೊಣೆ
ನನಗಿದೆ ದೃಢ ನಂಬಿಕೆ!

ಏ ಮಾಲಿಕ್, ತೆರೆ ಬಂದೆ ಹಮ್

21 August, 2015

ಚೂಡಿ- ಶ್ರಾವಣ ಸಂಭ್ರಮ


ವಿಷ್ಣು ನಾಮ ಸ್ಮರಣಂ

||ನ ವಾಸುದೇವ ಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ||

18 August, 2015

ಕನಸು ನನಸಾಗಲು...

||All things come through desire and every sincere prayer is answered||
-anonymous

ತೀವ್ರ ಹಂಬಲ
ಹೃತ್ಪೂರ್ವಕ ನಿವೇದನೆ
ಸಾಕು, ಕನಸೆಲ್ಲ ನನಸು.ಹ

17 August, 2015

ತುಜ್ಸೆ ನಾರಾಸ್ ನಹಿ ಜ಼ಿಂದಗಿ...

ಇಲ್ಲ ಬದುಕೇ,
ನಿನ್ನ ಮೇಲೇನೂ ಕೋಪವಿಲ್ಲ
ಚಕಿತಳಾಗಿರುವೆ ನಾ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

ಚಿಂತಿಸಿರಲಿಲ್ಲ ಬದುಕಲು
ನೋವುಗಳನು ಹೊರಬೇಕಾಗುವುದೆಂದು
ನಸುನಕ್ಕರೂ, ನಗುವಿನ ಋಣ ತೀರಿಸಬೇಕಾಗುವುದೆಂದು
ಭಯವೀಗೀಗ ನನಗೆ ಮುಖವರಳಿಸಿದರೂ ಎಲ್ಲಾದರು
ತುಟಿಯ ಮೇಲೆ ಋಣ ಭಾರವಿರಿಸುವೆನೆಂದು ||

ಹಾಗಂತ ಬದುಕೇ,  ಇಲ್ಲ
ನಿನ್ನ ಮೇಲಿಷ್ಟೂ ಕೋಪವಿಲ್ಲ
ಚಕಿತಳಾಗಿರುವೆ ನಾ ಬರೇ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

ತುಂಬಿದರೆ ಇಂದು ಹೊರಲಾರದಷ್ಟು
ದಪ್ಪದ ಹನಿಗಳು ಉದುರುವವು
ನಾಳೇನಾಗುವುದೇನೋ
ಅದರರಿವಿಲ್ಲವೀ ಹನಿಗಳಿಗೆ
ಹಂಬಲಿಸುವವೇನೋ ಕಣ್ಣೂಗಳು
ಎಲ್ಲಿ ಯಾವಾಗ ಹೋಗಿದೆಯೇನೋ ಕಳೆದು
ಬಚ್ಚಿದ್ದೆ ಕಂಬನಿಯೊಂದನು||

ಹಾಗಂತ ಬದುಕೇ,  ಇಲ್ಲ
ನಿನ್ನ ಮೇಲಿಷ್ಟೂ ಕೋಪವಿಲ್ಲ
ಚಕಿತಳಾಗಿರುವೆ ನಾ ಬರೇ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

13 August, 2015

ಸಾವಿರ ದಾಟಿದ ಖುಷಿ!

2004ರಿಂದ ಶುರುವಾದ ಹೊಸ ನಂಟು, ಹೊಸ ನೋಟ, ನಾಲ್ಕು ಗೋಡೆಯೊಳಗಿದ್ದುಕೊಂಡೇ ಒಂದು ಸಣ್ಣ ಕಿಟಿಕಿಯ ಮೂಲಕ ಪ್ರಪಂಚದ ತಿರುಗಾಟ, ಹೊಸ ಹೊಸ ವಿಷಯ, ತಾಂತ್ರಿಕತೆ, ಜೊತೆಗೆ ಹೊಸ ದಿಕ್ಕಿಗೆ ತೆರೆದುಕೊಳ್ಳುವ ಲಾಲಸೆ, ಎಲ್ಲೋ ಕಳೆದು ಹೋದ ಸಾಹಿತ್ಯದ ಸಂಗ ಮತ್ತೆ ಕೈಗೆಟುಕುವಷ್ಟು ಸಮೀಪ- ಮತ್ತೆ ಕೀ ಬೋರ್ಡ್ ಕುಟ್ಟಿ ಕುಟ್ಟಿ ಕಲಿತೆ. ಬರೆದೆ. ಬರೆದದನ್ನು ಇಲ್ಲಿ ಹಾಕುತ್ತ ಹೋದೆ. ಮನಸ್ಸಿಗೆ ಬಂದುದು ಯಾವ ಅಡೆತಡೆಯಿಲ್ಲದೆ ಆತಂಕವಿಲ್ಲದೆ "ತೆರೆದ ಮನಸಿನ ಪುಟಗಳ"ಲಿ ಮೂಡಿ ಬಂತು! 2007ರ ಆಗಸ್ಟ್ 15ರಂದು ಪ್ರಾರಂಭವಾದ ಬ್ಲಾಗ್ ಬರಹ 2011ರಿಂದ ಕವನ, ಕತೆ, ಛಾಯಾಚಿತ್ರಗ್ರಹಣ, ಬಣ್ಣಗಳಿಂದ ಕಳೆಗಟ್ಟಿತು. ಯಾರು ಏನನನ್ನುತ್ತಾರೋ ಎಂಬ ಸಂಕೋಚಕ್ಕೆಡೆಯಿಲ್ಲ. ಮುಕ್ತ ವಾತಾವರಣ. ಪ್ರೋತ್ಸಾಹ ಇದೆಯೋ ಇಲ್ಲವೋ.. ಯಾವುದರ ನಿರೀಕ್ಷೆಯಿಲ್ಲ. ಇಂದಿಗೆ ಸಾವಿರ ಪೋಸ್ಟ್ ದಾಟಿತು. So its celebration time!

ಸಾವಿರ ಒಂದನೆಯ ಪೋಸ್ಟ್!!! ಜೇಡ (ಫೋಟೋಗ್ರಾಫಿ)

Oxyopidae species..

Lynx spider


ಜೇಡ (ಫೋಟೋಗ್ರಾಫಿ)


Neoscona rumpfi


12 August, 2015

ಜೇಡ- ಬಲೆ (ಫೋಟೋಗ್ರಾಫಿ)



 Tetragnata viridorufa






leucauge decorata

ಜ಼ಿಂದಗಿ ಪ್ಯಾರ್ ಕಾ ಗೀತ್ ಹೈ!



ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು|
ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು|
ಈ ಬದುಕು ನೋವಿನ ಆಗರವು
ನಗುನಗುತಲೇ ಪಾಗರ ದಾಟಬೇಕು||


ಈ ಬದುಕೊಂದು ಅನುಭೂತಿ
ಭಗ್ನ ಮನಕೊಂದು ಆಶಾದೀಪ್ತಿ|
ಈ ಬದುಕೊಂದು ಅನುಭೂತಿ
ಭಗ್ನ ಮನಕೊಂದು ಆಶಾದೀಪ್ತಿ|
ಈ ಬದುಕೊಂದು ಪರವೂರು
ಕಾಲನಾಣತಿಯಂತೆ ಮರಳಲೇಬೇಕು||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಬೇಕು||

ಈ ಬದುಕಿಗೊಂದಿಷ್ಟೂ ನಿಷ್ಠೆಯಿಲ್ಲ ಆದರೂ ಏನಂತೆ
ನಮ್ಮವರೆಲ್ಲ ಆಗ್ರಹವನೆದುರಿಸುವೆನು ಛಲದಿಂದಲೇ|
ಈ ಬದುಕಿಗೊಂದಿಷ್ಟೂ ನಿಷ್ಠೆಯಿಲ್ಲ ಆದರೂ ಏನಂತೆ
ನಮ್ಮವರೆಲ್ಲ ಆಗ್ರಹವನೆದುರಿಸುವೆನು ಛಲದಿಂದಲೇ|
ನಮ್ಮಿಬ್ಬರ ಕೈಗಳು ಬೆಸೆಯದಿದ್ದರೇನಂತೆ
ಮನದ ಬೆಸುಗೆಗೆ ತಡೆಯಿಲ್ಲವಂತೆ||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು||

ಈ ಬದುಕೊಂದು ಮಂದಸ್ಮಿತೆಯಂತೆ
ನೋವಿನ ಅಸ್ಮಿತೆಯೂ ಹೌದಂತೆ|
ಈ ಬದುಕೊಂದು ಮಂದಸ್ಮಿತೆಯಂತೆ
ನೋವಿನ ಅಸ್ಮಿತೆಯೂ ಹೌದಂತೆ|
ಈ ಬದುಕೊಂದು ಅತಿಥಿಯಂತೆ
ಒಡೆಯನಿಗೆ ಮರಳಿ ಒಪ್ಪಿಸಲೇಬೇಕಂತೆ||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು||
ಈ ಬದುಕು ನೋವಿನ ಆಗರವು
ನಗುನಗುತಲೇ ಪಾಗರ ದಾಟಬೇಕು||





11 August, 2015

ಹಿಗ್ಗುವಿಕೆ ಅಥವಾ ಕುಗ್ಗುವಿಕೆಯ ಪ್ರಮಾಣ!

ಬದುಕಿನ ಹಿಗ್ಗುವಿಕೆ ಅಥವಾ ಕುಗ್ಗುವಿಕೆಯ ಪ್ರಮಾಣ ಅವರವರ "ಎದೆಗಾರಿಕೆ"ಯ ಮೇಲೆ ಅವಲಂಬಿತ!

Life shrinks or expands in proportion to one's courage!

10 August, 2015

ಬರಹ ಹುಟ್ಟುವ ಕಥನ...

ಓದುವ ಹವ್ಯಾಸ

ಕೆಲವು ಘಳಿಗೆಗಾದರೂ ಅಂದು ನಾ ಹೋಗುತ್ತಿದ್ದ ಸರಕಾರಿ ಗ್ರಂಥಾಲಯದ ಹಳೆಯ ಕಪಾಟುಗಳ ಎದುರು ಇಲ್ಲಿಂದಲೇ ಮತ್ತೆ ಪುಟಗಳನು ತಿರುಗಿಸುವ ಅವಕಾಶ ಕೊಟ್ರಿ!

ಸಾಹಿತ್ಯ ಹುಟ್ಟುವ, ಅಕ್ಷರಕ್ಕಿಳಿಯುವ ಪರಿಯು ಅಚ್ಚರಿಯೇ ಹೌದು! ಕಲ್ಪನೆ ಕಾಗದಕ್ಕಿಳಿಯುತ್ತಾ ಅನುಭೂತಿಗೆ ದಕ್ಕುವ ಅನನ್ಯತೆಯ ವಿವರಣೆ ಶ್ಲಾಘನೀಯ!

ತುಂಬು ಮನದ ಧನ್ಯವಾದ ನರೇಂದ್ರ ಪೈ!

08 August, 2015

ಶಿಷ್ಯಳ ಕೈಚಳಕ!


ಪೂರ್ವಜನ್ಮದ ಸುಕ್ರತ ಫಲವಲ್ಲದೇ ಇನ್ನೇನು!

ಪೂರ್ವಜನ್ಮದ ಸುಕ್ರತ ಫಲವಲ್ಲದೇ ಇನ್ನೇನು!

ಹೀಗೆ ಗುರು ಸ್ಥಾನಕ್ಕೇರಿಸಿದ್ದು ಮಾತ್ರವಲ್ಲ, ಗೌರವಕ್ಕಾರ್ಹತೆ ಪಡೆದದ್ದೂ!

ವರ್ಷ ವರ್ಷ ಗುರುಪೂರ್ಣಿಮೆ ದಿನ ಕಾಣಿಕೆ ಹಾಗೂ ವಂದನೆ ಸಲ್ಲಿಸುವ ಶ್ರೀಧರ್ ಈ ವರ್ಷ ಬಂದಿರಲಿಲ್ಲ. ಅರ್ಹತೆ ಕಳೆದುಕೊಂಡೆನೆ ಅಂತ ಅನಿಸಿದ್ದರೂ ಅದೂ "ಅವನ" ಲೀಲೆಯೇ ಅಂತ ಮರೆತುಬಿಟ್ಟಿದ್ದೆ.

ಶನಿವಾರದ ಡ್ರಾಯಿಂಗ್ ತರಗತಿಗೆ ಎಂದಿನಂತೆ ಬಂದವನು ಮೊದಲು ಕಾಲಿಗೆ ಬಿದ್ದು ಕ್ಷಮೆ ಬೇಡಿದವನು ತನಗೆ ಸೌಖ್ಯವಿಲ್ಲದ ಕಾರಣ ಗುರುಪೂರ್ಣಿಮೆ ದಿನ ಬರಲಾಗಲಿಲ್ಲವೆಂದವನಿಗೆ ಆಶೀರ್ವಾದವನ್ನೂ ಕೊಡಲೂ ಮರೆತು ಬಿಟ್ಟು ಬೆಪ್ಪಾಗಿ ನಿಂತಿದ್ದೆ.

ಏನಿದು ನಿನ್ನ ಲೀಲೆ ನನ್ನೊಡೆಯ! ನಿನ್ನೊಲವನ್ನು ಯಾವುದ್ಯಾವುದೋ ರೂಪದಲ್ಲಿ ತೋರಿಸುವಿ, ಮತ್ತೆ ಮತ್ತೆ ನನ್ನನ್ನು ಧನ್ಯಳನ್ನಾಗಿ ಮಾಡುವಿಯಲ್ಲೋ!!!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...