ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 July, 2015

ಅನಗತ್ಯ ಪ್ರಶ್ನೆಗಳು!

ಒಲವೇ,

“ಅದ್ಯಾವ ನೆಂಟು ನನ್ನದು ನಿನ್ನದು,

ಇರಲಿಕ್ಕಿಲ್ಲ ಬರೇ ಈ ಜನುಮದು!”

ಕಾಲಗರ್ಭ ಅಗೆಯಲು ಹೊರೆಟೆ ನಾನು.

ಒಲವು ನಸುನಕ್ಕಿತು, “ನಿಧಿ ನಿನ್ನದು,

ಮತ್ಯಾಕೆ ಈ ಅನಗತ್ಯ ಪ್ರಶ್ನೆಗಳು!”

ಒಲವೇ, ನಿನ್ನೀ ಮುಗುಳ್ನಗು..

ಒಲವೇ,
ಪರೀಕ್ಷೆಗಳು ಕಠಿಣ ಅನಿಸಿದರೂ...
ಹಾದಿಯಲಿ ಹರಡಿದ ಮುಳ್ಳುಗಳ ಅಡಗಿಸುವ ಗುಲಾಬಿ ಹಾಸು
ನಿನ್ನ ಮುಗುಳ್ನಗು!

ನಿನ್ನೀ ಪರಿಗೆ ನಾ ಬೆರಗು!

ಒಲವೇ,
ಹರಿದು ಚೂರಾದಂತೆ ಅನಿಸಿದರೂ...
ಸೂಜಿ-ದಾರವಿತ್ತು ಸಂತೈಸುವ ನಿನ್ನ ಪರಿಗೆ ನಾ ಬೆರಗು

ನಿನಗದು ಮೆರಗು!

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ!


30 July, 2015

ಒಲವು ಮತ್ತು ಸಲ್ಲಾಪ

ಒಲವಿಲ್ಲದ ಸರಸ ಸಲ್ಲಾಪ ಕೃಷ್ಣಪಕ್ಷದ ಚಂದಿರನಂತೆ..
ಸರಸವಿಲ್ಲದ ಒಲವೂ ಮೋಡ ಮುಸುಕಿದ ಚಂದಿರನಂತೆ..
ಒಲವೂ ಸರಸವೂ ಜತೆಯಾದರೆ ನಿತ್ಯ ಹುಣ್ಣಿಮೆ, ನಿತ್ಯ ವಸಂತಮಾಸ!

-ಜೇಮ್ಸ್ ಟಿ. ಎಡೆರ್(ಭಾವಾನುವಾದ)

ಪದ್ಯವಲ್ಲ, ಗದ್ಯವೂ ಅಲ್ಲವಂತೆ; ಮತ್ಯಾವುದಿವು?

ಹೀಗೇ.. ಸುಮ್ಮನೆ!

ಒಲವೇ,
ನಾ ಬರೆದುದನು ಪದ್ಯವೆನ್ನೋ ಹಾಗಿಲ್ಲ.. ಅಂತಾರಲ್ಲಪ್ಪ
ಹಾಗಾದರೆ ಅದು ಗದ್ಯವೇನು.. ತಲೆ ತಿರುಗಿಸ್ತಾರಪ್ಪ

ನಾ ಅವನ್ನು ಹೃದ್ಯವೆನ್ನಲೇನು? ಮೌನಿಯಾಗ್ತಾರಪ್ಪ!

ತಿರುವಿನ ಹಾದಿ ಮತ್ತು ಹೆಜ್ಜೆಗಳು!

ಒಲವೇ,
ಆ ತಿರುವಿನ ಹಾದಿಯಲಿ ನೀ ಎದುರಾದೆ,
ನಮ್ಮ ಹೆಜ್ಜೆಗಳು ಸದ್ದಿಲ್ಲದೆ ಜತೆಗೂಡಿದವು.
ಅದೊಂದು ದಿನ ಹಾದಿ ಕವಲೊಡೆಯಿತು,

ಮತ್ತು  ಹೆಜ್ಜೆಗಳು ಅಲ್ಲೇ ಬಾಕಿ ಉಳಿದವು!

ಕೇಳಿದೆಲ್ಲ ಕೊಡದವನು ಅವನು..

ಒಲವೇ,
ಹೇಳುತ್ತಾರಲ್ಲ
ದೊರೆಯುವುದೆಲ್ಲವು
ಪ್ರಾರ್ಥಿಸುವುದರಿಂದ
ಆದರೂ
ಅದ್ಯಾಕೆ
ಕೊಡನವನು
ನಾ
ಕೇಳಿದುದನೆಲ್ಲ!

ತಣ್ಣಗಿನ ನೆರಳು ನನ್ನೊಲವು!

ಒಲವೇ,
ಅನಿಸುತದೆ ನಿನ್ನ ನೋಡಿದಾಗಲೆಲ್ಲ ಕೇಳಬೇಕು ಎಂದು
ಬಿರುಬಿಸಿಲಿನ ಈ ಬದುಕಿಗೆ ತಣ್ಣಗಿನ ನೆರಳಾಗಿ ನೀ ಬರುವೆಯಾ ಎಂದು


ಮೂಡಣದ ರಂಗಿನ ರಥ!

ಮೂಡಣ ದಿಕ್ಕಿನಲಿ ಧೂಳೆಬ್ಬಿಸುವ ಪಥ

ಕಾಣುತಿದೆ ರಂಗು ತುಂಬಿಹ ಡಬ್ಬಿಗಳ ರಥ!

29 July, 2015

ಒಲವಿಲ್ಲದೆ...

ಒಲವಿಲ್ಲದೆ ಬಕುತಿಯಿಲ್ಲ...
ಬಕುತಿಯಿಲ್ಲದೆ ಮುಕುತಿಯಿಲ್ಲ!

ಮಹಾಕಾವ್ಯ ಒಲವು

ಶಬ್ದಗಳಿಗೆ ನಿಲುಕದ ಮಹಾಕಾವ್ಯ ಒಲವು, ಸುಮ್ಮನಿರುವುದೆ ಒಳಿತು
ಹೋಳಿಗೆ ಮೆದ್ದ ಮೂಕ ಸುಮ್ಮನೆ ಹಲ್ಲು ಕಿಸಿದನಂತೆ ಅರಿತು!
-ಕಬೀರ (ಭಾವಾನುವಾದ)

ಬೆಳ್ಳಿಯ ಅಡ್ಡಾದಿಡ್ಡಿ ರೇಖೆಗಳು..

ಒಲವೇ, 
ನಿಂಗೊತ್ತಾ...
ನಿಶೆಯ ಮಡಿಲಲಿ ಅವಳು ಬಚ್ಚಿಟ್ಟ ಹನಿಗಳು
ಭಾನು ಚೆಲ್ಲಿದ ರಂಗಿನ ಹುಡಿಯಲಿ ಬೆರೆತವು;
ಮುಗಿಲ ತುಂಬಾ ಮುಂಜಾವು ಎಳೆದ
ಬೆಳ್ಳಿಯ ಅಡ್ಡಾದಿಡ್ಡಿ ರೇಖೆಗಳನು ಬೆಸೆದವು!

ಭಲೆ ಬಲೆ!ಆಷಾಢದ ಹನಿಗಳು..
ಸಲ್ಲಾಪ...


28 July, 2015

ಕನಸುಗಳು ಅಕ್ಷರಗಳಾಗಿ...

ಇಣುಕುತಿವೆ ಕನಸುಗಳು ಅಕ್ಷರಗಳಾಗಿ
ಮನದ ಗೂಡ ಹೊರಗೆ ನನಸಾಗಿ!

ಸಹಕಾರವಿರಲಿ ನಿಯತಿಯೇ, ಒಂದಿಷ್ಟು
ಒಲವಿರಲಿ ಬಂಧುಗಳೇ, ಬಹಳಷ್ಟು!

ಕುಂದರಿರಲಿ ಬಲವು ಏಳ್ಳಷ್ಟು

ಬರೆಯುತ್ತಲೇ ಇರುವೆ ನನಗಾಗುವಷ್ಟು!

24 July, 2015

ಲೋಟ್ ಕೆ ಆಜ ಮೆರೆ ಪ್ರೀತ್... ಆಹಾ!!!

ಬರಸೆ ಗಗನ್ ಮೆರೆ
ಬರಸೆ ನಯನ್
ದೆಖೊ ತರಸೆ ಹೆ ಮನ್
ಅಬ್ ತೊ ಆಜಾ|
ಶೀತಲ್ ಪವನ್ 
ಎ  ಲಗಾಯೆ ಅಗನ್ ಹೊ
ಸಜನ್ ಅಬ್ ತೊ
ಮುಖಡಾ ದಿಖಾಜಾ|
ತುನೆ ಭಲೆ ರೆ ನಿಭಾಯೆ ಪ್ರೀತ್
ತುಜೆ ಮೆರಿ ಗೀತ್ ಬುಲಾತೆ ಹೈ
ಆ ಲೋಟಕೆ ಆಜಾ ಮೆರಿ ಮೀತ್|
ಎಕ ಪಲ್ ಹೈ ಹಸನಾ
ಎಕ ಪಲ್ ಹೈ ರೋನಾ
ಕೈಸಾ ಹೈ ಜೀವನ್ ಕಾ ಖೇಲಾ...
ಎಕ ಪಲ್ ಹೈ ಮಿಲನಾ
ಎಕ ಪಲ್  ಬಿಛಡನಾ

ದುನಿಯಾ ಹೈ ದೋ ದಿನೋಕೆ ಮೇಲಾ,... 

https://www.youtube.com/watch?v=-_dqxw_sH3M

18 July, 2015

16 July, 2015

ಪುಳಕಾಭಿಷೇಕ!ಪುಳಕಾಭಿಷೇಕ!

ಪುಳಕಾಭಿಷೇಕ..

ಹಸುರು ಪತ್ರಗಳ ಅಲಗುಗಳಲಿ
ಸಾಲಾಗಿ ನಿಂತಿಹ ಸಿಪಾಯಿಗಳು...

ನಿರ್ಮಲ, ಕೋಮಲ, ಪಾರದರ್ಶಕ
ಇಬ್ಬನಿಗಳ ಪುಳಕಾಭಿಷೇಕ ಮುಂಜಾವಿಗೆ..

15 July, 2015

ತೆರೆದಿದೆ ಮನೆ ಓss.. ಬಾ ಅತಿಥಿ!!!


ಕೀಟ ಲೋಕ! ಡಾಮ್ ಸೆಲ್ ಫ್ಲೈ!


ಗೆರೆಗಳ ಮಾಂತ್ರಿಕನ ನುಡಿ!

“ನನ್ನದೇ ಕಲೆಯ ಬಗ್ಗೆಯಾಗಲಿ, ಇನ್ನೊಬ್ಬರದರ ಬಗ್ಗೆಯಾಗಲಿ ಯೋಚನೆ ಮಾಡುವುದು ನನಗೆ ಹಿಡಿಸುವುದಿಲ್ಲ, ನಾನು ಬದುಕಿರುವುದು ಹೇಗೋ ಹಾಗೆಯೇ ನಾನು ಚಿತ್ರ ಬಿಡಿಸುವುದು ಕೂಡ- ಅಂತಃಪ್ರೇರಣೆಯಿಂದ. ನನ್ನ ಕಲೆಯಲ್ಲಿ ಏನು ಪ್ರಗತಿಯಾಗಿದೆ ಎಂದು ನನಗೆ ಗೊತ್ತಾಗುವುದು ಚಿತ್ರವನ್ನು ಮುಗಿಸಿದ ಮೇಲೆ ಮಾತ್ರ”


-ಕೆ. ಕೆ. ಹೆಬ್ಬಾರ

14 July, 2015

“ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ.. “

“ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ.. “

ಬೆಳಗಿನಿಂದಲೂ ಸುಮ್ ಸುಮ್ನೆ ಬುಸುಗುಟ್ಟುತ್ತಿದ್ದಳು..
ಗವಾಕ್ಷಿಯಿಂದಲೇ ಒಳಗೆ ನುಸುಳಿದ ಒಲವಿಗೆ ಎಂದಿನ ನಸುನಗೆಯ ಸ್ವಾಗತವಿಲ್ಲ.
ದೋಸೆ ಹುಯ್ದು, ಮಸಾಲೆ ಮೇಲೆ ಒಂದಿಷ್ಟು ಹೆಚ್ಚೇ ಚಟ್ನಿ ಸುರಿದು, ಒಲವಿನ ಮುಂದೆ ಕುಕ್ಕಿದಳು. ಜತೆಗೆ ದಟ್ಟಕಪ್ಪು ಬಣ್ಣದ ಕಾಫಿಯ ಕಪ್ಪೂ!
“ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ.. “
ಒಲವು ಗೊಣಗುಟ್ಟಿತು.
“ಅಂದ್ರೆ!”

ಕೇಳಿದವಳಿಗೆ ಮುಗಿಲಲಲ್ಲಿ ಹರಡಿದ ಬೂದಿ ಬಣ್ಣದ ಮಸುಕು ಮುಂಜಾವನ್ನು ತೋರಿಸಿತು ಒಲವು!

13 July, 2015

“ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ... “

“ಕೋಣನ  ಮುಂದೆ ಕಿನ್ನರಿ ಬಾರಿಸಿದ ಹಾಗೆ... “
____________________________________

“ಹುಡುಗನ ಕಡೆಯವರು ಏನೂ ಕೇಳಿಲ್ಲವೇನು ಸರಿ, ಆದರೆ ಬೋಳು ಕುತ್ತಿಗೆಯಲ್ಲಿ ಕನ್ಯಾದಾನ ಮಾಡೋಕ್ಕಾಗುತ್ತಾ! ನೀವು ಸ್ವಲ್ಪ ಸಮಯ ನಿಮ್ಮ ಹವ್ಯಾಸಗಳಿಗೆ ನಾಕಾಬಂದಿ ಮಾಡ್ಕೊಳ್ಳಿ... "
ಬಾಯಿ ಒಣಗುವ ತನಕ ಹೇಳುತ್ತಲೇ ಇದ್ದಳು.
ತಲೆ ಅತ್ತಿತ್ತ ತೂಗಾಡಿತು...
ಮರುದಿನ ಮಾಲುತ್ತಾ ಬಂದವನನ್ನೂ, ಅವನ ಖಾಲಿ ಕಿಸೆಯನ್ನೂ ನೋಡಿ,
“ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.. “
ಅತ್ತೆ ಗೊಣಗಿದರು!

ಹ್ರಸ್ವ ಕತೆ..


ಇಬ್ಬರೂ ಪೈಪೋಟಿಯಲ್ಲಿ ಎಳೆದಾಗ ಮೊದಲೇ ಶಿಥಿಲವಾಗಿದ್ದ ರೇಶ್ಮೆ ಪತ್ತಲ ಎರಡು ಭಾಗ!
’ಹ್ಮ್, ಅವನಿಗೆ ಬೇಡವಾದದ್ದು ನನಗೂ ಯಾಕೆ! ನಾನೇನು ಕಡಿಮೆ, ಹೊಸತೇ ಕೊಳ್ಳುವೆ.’
ರಸ್ತೆ ದಾಟಿ ಕಸದ ಬುಟ್ಟಿಯತ್ತ ನಡೆದವಳಿಗೆ ತಾನೇ ನೇಯ್ದ ಕಸೂತಿ ಕಾಣಿಸಿತು..
ಕೈ ತಡೆಯಿತು, ಕಾಲು ಬಂದ ದಾರಿಯಲ್ಲೇ ಮತ್ತೆ ಸಾಗಿತು.
ತೇಪೆ ಹಚ್ಚಲು ಕುಳಿತವಳ ಕಣ್ಣಲ್ಲಿ ಮತ್ತೆ ಹೊಸ ಬೆಳಕು!


"Take the road less travelled", they said.
She checked the travelogue and called travel office, booked her tickets to home.
- Priyanka

ಇಬ್ಬರೂ ಎಳೆದಾಡಿ ಹರಿದ ರೇಶ್ಮೆ ಪತ್ತಲದೊಂದಿಗೆ ಹೊಸ್ತಿಲು ದಾಟಿದವಳಿಗೆ ತಾನೇ ನೇಯ್ದ ಕಸೂತಿ ಬೇಡಿಯಾಯ್ತು. ಮತ್ತೆ ಅದೇ ಬದುಕಿನೊಂದಿಗೆ ಹೊರಾಡುವ ಸಂಕಲ್ಪದೊಂದಿಗೆ ಮನೆಯೊಳಗೆ ನಡೆದಳು!

12 July, 2015

ಮಿರ್ಜಾ ಗಾಲಿಬ್!

ಊರು-ಕೇರಿ ಬದಲಾಯಿತು;
ವೇಷ-ಭೂಷಣದಲ್ಲೂ ವೈವಿಧ್ಯ;
ಬಂಧು-ಬಾಂಧವ್ಯದಲ್ಲಿ ಮಾರ್ಪಾಟು;
ಸ್ನೇಹ-ಸಂಬಂಧಗಳೂ ಹೊಸದಾದವು;
ಮನ ಈಗಲೂ ಅದೇ ಚಿಂತೆ-ಕಂತೆಗಳ ಸಂತೆ..
ಲೋಕದಲಿ ಬದಲಾವಣೆಗಳ ಬಯಸಿದೆ,
ನಾ ಬದಲಾಗಲೇ ಇಲ್ಲ..

ಗಾಲಿಬ್ ಹೇಳುತ್ತಾರೆ,
ಹುಟ್ಟಿದಾಗಿಂದಲೂ ಇದೇ ತಪ್ಪುಗಳ ಪುನರಾರ್ವತನೆ,
ಕನ್ನಡಿಯನ್ನು ತಿಕ್ಕುತ್ತಲೇ ಕುಳಿತೆ..
ಮುಖದ ಕಲೆ ಹಾಗೇ ಉಳಿಯಿತು!

-ಮಿರ್ಜಾ ಗಾಲಿಬ್

ಕಬೀರ...

ಕಾಳಿನೊಳಗಿನ ಎಣ್ಣೆ, ಕಲ್ಲಿನೊಳಗಿನ ಬೆಂಕಿ ಕಂಡವನು ನೀನು      
ನಿನ್ನೊಳಗಿರುವ ಅವನನೂ ಕಾಣಬಲ್ಲೆ ಏನು!

-ಕಬೀರ 

10 July, 2015

ಗೆರೆಗಳ ಓಟ


09 July, 2015

ಅಂತರಂಗ ಪಯಣ

ಒಲವೇ,

ಈ ಅಂತರಂಗದ ಪಯಣ
ಧೀ ಶಕ್ತಿಯ ಉದ್ದೀಪನ
ನಮ್ಮೀ ಅನುರಾಗಕೆ ನವಚೇತನ!

08 July, 2015

ಪ್ರಕೃತಿ!!!


ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...