ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 July, 2014

ಸಂಕಟವಾಗ್ತಿದೆ!




ಸಂಕಟವಾಗ್ತಿದೆ.. !
-------------

ಇನ್ನು ಮುಂದೆ ಟೀಚರ್ ಹತ್ರ ಕಂಪ್ಲೈಂಟ್ ಮಾಡಿದ್ರೆ ರೇಪ್ ಮಾಡಿ ಬಿಡ್ತೇನೆ.”

ಒಂಬತ್ತನೆಯ ತರಗತಿಯ ಹುಡುಗ ತನ್ನದೇ ತರಗತಿಯ ಹುಡುಗಿಗೆ ತನ್ನ ವಿರುದ್ಧ ದೂರು ಕೊಟ್ಟದಕ್ಕೆ ಕೊಟ್ಟ ಎಚ್ಚರಿಕೆ.

ನಾಲ್ಕು ತಿಂಗಳ ಹಿಂದೆ ಕೆಲ ಹುಡುಗಿಯರು ನನ್ನ ಬಳಿ ಹೇಳಿ ಹಂಚಿಕೊಂಡಿದ್ದರು. ತುಂಬ ಸಂಕಟ ಪಟ್ಟಿದ್ದೆ. ನಮ್ಮ ಸಮಾಜ ತೀವ್ರ ವೇಗದಲ್ಲಿ ಬದಲಾಗುತ್ತಿದೆ. ಹೆಣ್ಣಿಗೆ ಸಮಾನ ಸೌಲಭ್ಯ ಕೊಡುತ್ತಲೇ ತನ್ನ ಸರಿಸಮಾನಳಾಗದ ಹಾಗೆ ಅವಳ ದೌರ್ಬಲ್ಯವನ್ನೇ ತನ್ನ ಗುರಾಣಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಪುರುಷರು!

“ಹೆಚ್ಚು ಮಾತನಾಡಿದರೆ ಹಲ್ಲುದುರಿಸಿಬಿಡ್ತೇನೆ, ಮುಖದ ಶೇಪೇ ಬದಲಾಯಿಸ್ತೇನೆ.. !”

ರೋಪ್ ಹಾಕುತ್ತಿದ್ರು.. ಆದ್ರೆ ಈಗ ದೇಶದ ಎಲ್ಲೆಡೆ ನಡೆಯುವ ಅತ್ಯಾಚಾರಗಳಿಂದ ಪ್ರೇರಿತರಾಗಿ ದಮ್ಕಿ ಕೊಡುವ ಹೊಸ ಮಾರ್ಗ!

ಹೆಣ್ಣಿಗೆ ಬುದ್ಧಿ ಕಲಿಸಲು, ಮತ್ತೆ ಎಂದೂ ಏಳದಂತೆ ಪಾತಾಳಕ್ಕೆ ತಳ್ಳಲು ಅತೀ ಸುಲಭ ಮಾರ್ಗ ಅತ್ಯಾಚಾರ.

ದುರ್ಯೋಧನನು ತನ್ನನ್ನು ಪರಿಹಾಸ್ಯ ಮಾಡಿದ ದ್ರೌಪದಿಗೆ ಬುದ್ಧಿ ಕಲಿಸಲು ಆರಿಸಿದ ಮಾರ್ಗ ಇಂದಿಗೂ ಪ್ರಚಲಿತ.

ಹೆಣ್ಣೊಬ್ಬಳು ತನಗೆ ಹಿಡಿಸದ ಬರಹ ಅಥವಾ ತನಗೆ ವಿರುದ್ಧವಾಗಿ ದನಿಯೆತ್ತಿದರೆ ಮತ್ತೆ ಅದೇ ಅಸ್ತ್ರ!

ತತ್ವಶಾಸ್ತ್ರಗಳನ್ನು ಅರೆದು ಓದಿ ಅನೇಕ ಪುಸ್ತಕಗಳನ್ನು ಬರೆದವರೂ ಕೋಪದ ತಾಪಕ್ಕೆ ಬಲಿಯಾಗಿ ಕೇವಲವಾಗಿ ಮಾತನಾಡುವಷ್ಟು ಇಳಿದುಬಿಟ್ಟರಲ್ಲವೇ!!!



ತೀವ್ರಕಾಮಿಗಳಿಂದ ನಡೆಯುತ್ತಿರುವ ಅತ್ಯಾಚಾರಗಳ ಜತೆ ಪುರುಷ ಅಹಂನ್ನು ವಿರೋಧಿಸಿದರೆ ಎಚ್ಚರ ಸ್ತ್ರೀಯರೇ! ನಮ್ಮ ಬರಹ, ಕಮೆಂಟುಗಳ ಬಗ್ಗೆ ನಾವಿನ್ನು ತುಂಬಾ ಎಚ್ಚರದಲ್ಲಿರಬೇಕಾಗುತ್ತದೆ. ಇಲ್ಲ ಅವಮಾನಗಳನ್ನು ಎದುರಿಸಿ ನಿಲ್ಲುವಂತಹ ವಿಶೇಷ ಶಕ್ತಿ ಪಡೆಯಬೇಕಾಗುತ್ತೆ. 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...