ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

04 December, 2013

ಒಲವಿನ ಬಯಕೆ.. ನನ್ನೊಳಗಿನ!

ಇಲ್ಲ ಬೇರೆ ಬಯಕೆ..

ಆಸೆ ನನ್ನೊಳಗಿನ ಒಲವಿಗೆ..

ಪೂರ್ಣತೆ ಪಡಕೊಳ್ಳುವುದ ಹೊರತು ಮತ್ಯಾವ ನಿರೀಕ್ಷೆಯಿಲ್ಲ ನನ್ನೊಳಗಿನ ಒಲವಿಗೆ…

ಮುಗಿಲಿಗೆಲ್ಲ ಹೊನ್ನ ತೋರಣ ಕಟ್ಟುತ ಉದಯಿಸುವ ದಿನಕರನ ಸ್ವಾಗತಿಸಲು ರೆಕ್ಕೆ ಬಡಿಯುತ ಬಾನಲಿ ಹಾರುವ ಮನಸು ನನ್ನೊಳಗಿನ ಒಲವಿಗೆ..

ಪೂರ್ಣವಾಗಿ ಕರಗಿ ಇರುಳಿಗೆ ತನ್ನ ಮಧುರ ಗಾಯನ ಉಣಬಡಿಸುತ್ತ  ಬಳಕುತ ಸಾಗುವ ಹಳ್ಳದ ಹಾಗೆ ಜೋಗುಳ ಹಾಡುತ ನಿದ್ದೆ ಹೋಗುವ ತವಕ ನನ್ನೊಳಗಿನ ಒಲವಿಗೆ..

ಅಷ್ಟ ದಿಕ್ಕುಗಳಿಂದಲೂ ಒಲವ ಪಡೆಯುವ ಬಯಕೆಯೊಂದಿಗೆ ಹೊಸ ದಿನಕೆ ಸುಸ್ವಾಗತ ಕೋರುವ ಸಿದ್ಧತೆ ನನ್ನೊಳಗಿನ ಒಲವಿಗೆ.

- ಪ್ರೇರಣೆ ಗಿಬ್ರಾನ್


“Love has no other desire but to fulfill itself. To melt and be like a running brook that sings its melody to the night. To wake at dawn with a winged heart and give thanks for another day of loving” 
~ Kahlil Gibran 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...