ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 September, 2013

ತೆರೆ ಬಿನಾ ಜ಼ಿಂದಗಿ ಸೆ ಕೋಯಿ ಶಿಕವಾ ತೋ ನಹೀ!

ತೆರೆ ಬಿನಾ ಜ಼ಿಂದಗಿ ಸೆ ಕೋಯಿ ಶಿಕವಾ ತೋ ನಹೀ!

ನೀನಿಲ್ಲದ ಈ ಬದುಕಿನಲಿ ಇಲ್ಲ
ಯಾವುದೇ ದೂರು ಇಲ್ಲ
ದೂರಿಲ್ಲ ಯಾವುದೇ ದೂರಿಲ್ಲ
ಆದರೂ ನೀನಿಲ್ಲದೀ ಬದುಕು ಬಾಳೇ..
ಅಲ್ಲವೋ ಬಾಳಲ್ಲ ಅದು ಬಾಳಲ್ಲ
ಅದು ಬಾಳಲ್ಲವೇ ಅಲ್ಲ..||

ಹೀಗಾಗಿದ್ದಿದ್ದರೆ.. ನಿನ್ನ ಜತೆಯಲಿ ಸಾಗುತ್ತ,
ಆಯ್ದು ಗುರಿಯೊಂದನು,
ಅತ್ತ ಕೈಹಿಡಿದು ನಡೆದಿದ್ದರೆ..
ಎಲ್ಲೋ ದೂರ.. ಬಲು ದೂರ..
ನಿನ್ನ ಜತೆಯೊಂದಿದ್ದರೆ
ಗುರಿಯ ಕೊರತೆಯೂ ಇರುತ್ತಿರಲಿಲ್ಲ ||

ನೀನಿಲ್ಲದ ಈ ಬದುಕಿನಲಿ ಇಲ್ಲವೋ
ಯಾವುದೇ ದೂರು ಇಲ್ಲವೋ,
ದೂರಿಲ್ಲವೋ, ಯಾವುದೇ ದೂರಿಲ್ಲವೋ||

“ಆರತಿ, ಈ ಸೌಂದರ್ಯವನ್ನೆಲ್ಲ ಹಗಲಲ್ಲಿ ನೋಡಬೇಕು.. “
“ಹುಂ, ನನಗೆಲ್ಲಿ ಹಗಲಲ್ಲಿ ಬರಲಾಗುತ್ತದೆ.. !”
“ಈ ಚಂದಿರನು ಹಗಲಲ್ಲಿ ಕಾಣಿಸೊಲ್ಲ.. ರಾತ್ರಿ ಮಾತ್ರ ಕಾಣಿಸುತ್ತಾನೆ!”
“ಹುಂ, ಪ್ರತಿ ರಾತ್ರಿ ಕಾಣಿಸಿಕೊಳ್ಳಬಹುದಲ್ಲವ..”
ಹೂಂ, ಆದರೆ ಮಧ್ಯೆದಲ್ಲಿ ಅಮವಾಸ್ಯೆ ಬರುತ್ತದೆ.... ಹೇಳಲೇನೋ ಅಮವಾಸ್ಯೆ ಹದಿನೈದು ದಿನದ್ದು.. ಈ ಸಲವಂತೂ ದೀರ್ಘವಾಗಿತ್ತು..”
“ಒಂಬತ್ತು ವರ್ಷ ಬಹಳ ದೀರ್ಘವಲ್ಲವೆ!”

ಜೀವ ಚಡಪಡಿಸುತ್ತಿದೆ
ನಿನ್ನೀ ಮಡಿಲಲಿ ಮಲಗಲು
ಮುಖಮುಚ್ಚಿ ಅಳಲು, ಅಳುತ್ತಲೇ ಇರಲು..
ನಿನ್ನೀ ಕಣ್ಣುಗಳ ಹನಿಗಳೂ ಒದ್ದೆಯಾಗಿದೆಯೇನು.. ||

ನೀನಿಲ್ಲದ ಈ ಬದುಕಿನಲಿ ಇಲ್ವೆ
ಯಾವುದೇ ದೂರು ಇಲ್ವೆ,
ದೂರಿಲ್ಲವೆ, ಯಾವುದೇ ದೂರಿಲ್ಲವೆ
ಆದರೂ ನೀನಿಲ್ಲದ ಬದುಕು ಬಾಳೇ..
ಅಲ್ಲವೆ ಬಾಳಲ್ಲ, ಅದು ಬಾಳಲ್ಲ
ಅದು ಬಾಳಲ್ಲವೇ ಅಲ್ಲ..||

ಹೇಳಿ ನೋಡಂತೊಮ್ಮೆ..
ಚಂದಿರನಿಂದು ತೆರಳುವುದಿಲ್ಲ..
ತಡೆದುಬಿಡು ಅವನನಿಂದು
ಈ ಇರುಳೊಂದು ಉಳಿಯಲಿ..
ಮತ್ತಿನ್ನೇನು ಬದುಕಿನಲಿ ಉಳಿದಿಲ್ಲ..||


ನೀನಿಲ್ಲದ ಈ ಬದುಕಿನಲಿ ಇಲ್ಲ
ಯಾವುದೇ ದೂರು ಇಲ್ಲ..
ದೂರಿಲ್ಲ ಯಾವುದೇ ದೂರಿಲ್ಲ
ಆದರೂ ನೀನಿಲ್ಲದ ಬದುಕು ಬಾಳೇ..
ಅಲ್ಲವೆ ಬಾಳಲ್ಲ, ಅದು ಬಾಳಲ್ಲ

ಅದು ಬಾಳಲ್ಲವೇ ಅಲ್ಲ..||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...