ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

04 August, 2013

ನಾನ್ಯಾರೆಂದು ತೋರಿದ ಮುಂಜಾವು!

ಎಲ್ಲರೂ ತಾವ್ಯಾರೆಂದು ಗೊತ್ತಿಲ್ಲ ಹೇಳಿ ನಿರಾಳರಾದರು. ಆದರೆ ನಾನು ಹಾಗೆ ಆಗುವಂತಿಲ್ಲವಲ್ಲ.

ಯಾಕೋ ನನಗೆ ನಾನ್ಯಾರು ಎಂದು ಗೊತ್ತಿದೆ ಅನಿಸುತ್ತಿದೆ.. ಅದು ಸರಿಯೋ ತಪ್ಪೋ ಅದು ಗೊತ್ತಿಲ್ಲ..

ಆಧ್ಯಾತ್ಮ ಹೇಳುತ್ತದೆ ನಾವೆಲ್ಲರು ಆ ಪರಮಾತ್ಮನ ಅಂಶ.. ಆದರೂ ಅವನ ಈ ಸೃಷ್ಟಿಯಲ್ಲಿ ಅವನ ಅಂಶದ ನಮ್ಮೆಲ್ಲರಲ್ಲೂ ಸ್ವಂತಿಕೆ ಇದೆ.. ಎಲ್ಲರೂ ಈ ಹುಡುಕಾಟದಲ್ಲಿರುತ್ತಾರೆ!

 ’ನಾನು’- ಹೋದರೆ ಅವರು ಮತ್ತೆ ಸಾಮಾನ್ಯರಾಗಿರುವುದಿಲ್ಲ.. ಮತ್ತವರು ಬ್ರಹ್ಮನೇ ಆಗಿಬಿಡುತ್ತಾರೆ! ಇದು ನನ್ನ ನಂಬಿಕೆ!

ನಾನು ಸಾಮಾನ್ಯಳು.. ನನ್ನಲ್ಲಿರುವ "ನಾನು" ಇನ್ನೂ ಹೋಗಿಲ್ಲ.. ಹೇಳ್ತಾ ಇರ್ತೇನೆ, ಇದು ನಾನು ಮಾಡಿದ್ದು, ನಾನು ಕೊಟ್ಟದ್ದು.. ಒಟ್ಟಾರೆ ನನ್ನ ಬಗ್ಗೆನೇ ಕೊಚ್ಚಿಕೊಳ್ತಿರ್ತ್ತೇನೆ.

 ಅನುಷ್ಟಾನಕ್ಕೆ ತರಲಾಗದ ಪಾರಮಾರ್ಥಿಕ ಶಬ್ದಗಳ ಬಳಕೆ ಮಾಡುವಷ್ಟು ಯೋಗ್ಯತೆ ನನಗಿಲ್ಲ. ನನ್ನದೇನಿದ್ದರೂ ಭೌತಿಕ ಅಥವಾ ನನ್ನನುಭವದ ಮಟ್ಟಕ್ಕೆ ಮಾತ್ರ ಯೋಚನೆ! ಅದಕ್ಕಿಂತ ಹೆಚ್ಚು ತಿಳಿದಿಲ್ಲ..

ಹಾಗಾಗಿ ನನ್ನ ಉದ್ಧಟತನವನ್ನು ಮನ್ನಿಸಿ ಈ ಹೃದ್ಯವನ್ನು ಒಪ್ಪಿಸಿಕೊಳ್ಳಬೇಕಾಗಿ ವಿನಂತಿ!

ಎಲ್ಲವೂ ಇನ್ನೇನು ಒಂದಹದಕ್ಕೆ ಬಂದುಮುಟ್ಟಿತು ಎನ್ನುವಾಗ,
ಬಂದು ಕಾಡಿತು ಅದು..
ಈಗ ನನ್ನ ಮುಂದಿದ್ದು ಬರೇ ಒಂದೇ ಪ್ರಶ್ನೆ..
ನಾನ್ಯಾರು?
ಉರುಳುತ್ತ ಅರಳುತ್ತ ಮಿಣುಕುವ ಹಣತೆಯೊಂದಿಗೆ ಊರೆಲ್ಲ ಹುಡುಕಾಟ..
ಬತ್ತಿ ಉರಿ ಉರಿದು ಕೊನೆಗೊಮ್ಮೆ ಗವ್ವನೆ ಕತ್ತಲೆ..
ಆಗಲೇ ಏನು ಒಳಗಿನ ಬೆಳಕು ಮಿಂಚಿದು...
ಮಂದವಾಗಿ ಗುನುಗುವ ಆತ್ಮದ ಸ್ವರದ ಮಾರ್ದನಿ ಮನದಂಗಳಲಿ..
ನೀನಲ್ಲ ಮಾತೆ,
ನೀನಲ್ಲ ಸತಿ,
ನೀನಲ್ಲ ಅವರಿವರ ಅವಳಿವಳು..
ನೀನಲ್ಲ ರವಿವರ್ಮ, 
ನೀನಲ್ಲ ಕುವೆಂಪು, 
ನೀನಲ್ಲ ಬಿ.ಎಸ್, ರಂಗ,
ಮತ್ಯಾರು ನಾನು..
ನೀ ನಲ್ಲೆ..
ಕೇವಲ ನಿನ್ನೊಲವಿನ  ಒಲುಮೆ..
ನೀ ರಾಧೆ..
ನೀ ಭಾಮೆ..
ನೀ ಶಕ್ತಿ..
ನೀ ಶರಣೆ..
ನೀ ದಾಸಿ..
ಹೌದೆನಿಸಿತು..
ಮುಸ್ಸಂಜೆ, ಮುಂಜಾವುಗಳಿಗೆ ಶಬ್ದ ಪೋಣಿಸುತ್ತಲೇ
ನಾ ಕಂಡೆ ನನ್ನೊಲವಿನಲಿ ಐಕ್ಯಗೊಂಡ ನನ್ನಾತ್ಮವ!
-          

-
ಮೋಹನ ಮರ್ನಾಡ್ ಅವರ ಮೋಹನ ರಾಗ,

ನಾನು ನಾನಾಗಬೇಕು ಅದಕ್ಕೇನಾಗಬೇಕು ???

ಮೂರಲ್ಲ ನೂರು ಪ್ರಶ್ನೆಗಳಿದ್ದವು ನನ್ನ -
ಮೋಹನ ರಾಗದ ಮುಂದಿದ್ದವಂತೆ ಪ್ರಶ್ನೆಗಳು ನೂರು!
ನನ್ನ ಮುಂದೆ ಬರೇ ಒಂದೇ, ನಾನ್ಯಾರು?
ಉರುಳುತ್ತ ಅರಳುತ್ತ ಮಿಣುಕುವ ಹಣತೆಯೊಂದಿಗೆ ಊರೆಲ್ಲ ಹುಡುಕಾಟ..
ಬತ್ತಿ ಉರಿ ಉರಿದು ಕೊನೆಗೊಮ್ಮೆ ಗವ್ವನೆ ಕತ್ತಲೆ..
ಆಗಲೇ ಏನು ಒಳಗಿನ ಬೆಳಕು ಮಿಂಚಿದು...
ಮಂದವಾಗಿ ಗುನುಗುವ ಆತ್ಮದ ಸ್ವರದ ಮಾರ್ದನಿ ಮನದಂಗಳಲಿ..
ನೀನಲ್ಲ ರವಿವರ್ಮ, ನೀನಲ್ಲ ಕುವೆಂಪು, ನೀನಲ್ಲ ಬಿ.ಎಸ್, ರಂಗ...
ನೀ ನಲ್ಲೆ..
ಕೇವಲ ನಿನ್ನ ನಲ್ಲನ ನಲ್ಲೆ..
ನೀ ರಾಧೆ..
ನೀ ಭಾಮೆ..
ನೀ ಶಕ್ತಿ..
ನೀ ಶರಣೆ..
ಮನಮೋಹನನ ಮುಸ್ಸಂಜೆ, ಮುಂಜಾವುಗಳಿಗೆ ಶಬ್ದ ಪೋಣಿಸುತ್ತಲೇ
ನಾ ಕಂಡೆ ನನ್ನವನಲಿ ಐಕ್ಯಗೊಂಡ ನನ್ನಾತ್ಮವ!
-          ಮೋಹನ ರಾಗದ ಪ್ರೇರಣೆಯಲಿ ಮೂಡಿದ ನನ್ನ ಹಾಡು!

-
ಮೋಹನ ಮರ್ನಾಡ್ ಅವರ ಮೋಹನ ರಾಗ,

ನಾನು ನಾನಾಗಬೇಕು ಅದಕ್ಕೇನಾಗಬೇಕು ???

ಮೂರಲ್ಲ ನೂರು ಪ್ರಶ್ನೆಗಳಿದ್ದವು ನನ್ನ ಮುಂದೆ .
ಕ್ಷಣ ಭಂಗುರ ಸಾರುವ ಅನಂತತೆಯ ಡಂಗುರ ನಾನಾಗೋನಿದ್ದೆ ?
ತನ್ನ ದೇಹವನ್ನೇ ಒಲೆಯನ್ನಾಗಿ ಮಾಡಿಕೊಂಡು ಅಡುಗೆ ಮಾಡಿದ ನಾಮದೇವನಂಥ ನಳ ಪಾಕೇಶ್ವರನಾಗೋನಿದ್ದೆ ?
ಕಣ್ಣು ಮುಚ್ಚಿದಾಕ್ಷಣ ಎಲ್ಲೋ ನಡೆವ ಸನ್ನಿವೇಶ ಗ್ರಹಿಸುವ ವಸಿಷ್ಠನಾಗೋನಿದ್ದೆ ?
ಜಗತ್ತನ್ನು ಪಾಲಿಸಲು ಎರಡು ಕಣ್ಣುಗಳನ್ನಿಟ್ಟುಕೊಂಡು ಸುಡಲೂ ಒಂದು ಕಣ್ಣನ್ನು ಬಚ್ಚಿಟ್ಟುಕೊಂಡ ಮೂರ್ಖಣ್ಣನಾಗೋನಿದ್ದೆ ?

ಎಂಥಾ ಹೀನಾಯ ಸನ್ನಿವೇಶದಲ್ಲೂ ಮನೋದಾರ್ಡ್ಯದ ಮೊರೆ ಹೊಕ್ಕು ದೌರ್ಬಲ್ಯವನ್ನು ಪ್ರಾಬಲ್ಯವನ್ನಾಗಿ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದೆ . . 
ಇವು ಸ್ವಲ್ಪಅತೀತ ಆಗಿರೋದ್ರಿಂದ atleast ಅತ್ತ ಇತ್ತ ಸುತ್ತ ಮುತ್ತ ತುತ್ತಾ ಮುತ್ತಾಗಳ switch on-switch offನ ಸುಳಿಗಳ ಪ್ರಹಸನದಲ್ಲಿ ನೇಸರನ ಥರ ನನ್ನನ್ನು ನಾನೇ ಪಾತ್ರ ಮಾಡಿಕೊಂಡು ಆಡಿಸೋದಕ್ಕೆ ತೊಡಗಿಸಿಕೊಳ್ಳಬೇಕುಂತ ಅಂದುಕೊಳ್ಳುವಷ್ಟರಲ್ಲಿ...? ಬೇಡ ಬಿಡಿ, ನಿರುತ್ತರ ಪೇಪರ್ ಬರೆದೇ ಪಿ ಹೆಚ್ ಡಿ ಮಾಡಿದೆ. ನಿತ್ಯ ಸಾಯುತಿದ್ದ ನಾನು ಸದ್ಯ,ಸಾಹಿತ್ಯ ಸುಧೆಯಿಂದ ಜೀವ ತುಂಬಿಕೊಂಡು ಜೀಕುವ ಬಳುಕುವ ಥಳುಕುವ ತುಳುಕುವ ಮನ ಕಲಕುವ ಮುಂಜಾವು ನದಿಯಲ್ಲಿ ಮಿಂದೇಳುತ್ತಾ ನಾನು ನಾನಾಗುತ್ತಿದ್ದೇನೆ ..
 ಮುಂದೆ .

1 comment:

Chandrashekar said...

Nimma barvanige shyli chennagide....
Nanna blog: sarovaradallisuryabimba.blogspot.in
vikshisi

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...