ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 August, 2013

ಬಾಲ್ಯದ ಬುತ್ತಿ ಬಿಚ್ಚಿದ ಮುಂಜಾವು!

-
ಬದುಕ ಕಟ್ಟಲು
ಕನಸ ನನಸು ಮಾಡಲು
ದೂರ ನೀ ನಡೆದರೂ
ನೀ ಹೊತ್ತು ನಡೆದಿರುವೆ
ಈ ಮಣ್ಣ ಕಂಪು..
ಪ್ರತೀ ಮುಂಜಾವು
ತೆರೆದು ನೋಡು ಒಳಕಣ್ಣು
ಮತ್ತೆ ನೀ ಕಾಣುವೆ
ನಿನ್ನೂರಿನ ಇಬ್ಬನಿಯಲಿ ತೊಯ್ದ
ನಿನ್ನ ಬಾಲ್ಯದ ದಿನಗಳನು..
ನೀ ಉಸರದೇ ಉಸಿರಿನಲಿ
ತೇಲಿಸಿಹ ಭಾವಗಳ ಗಂಟು
ಬಿಚ್ಚಿ  ಓದುವೆನು ನಿತ್ಯ
ನೀ ಮರುಗದಿರು
ಗುರಿಯತ್ತ ನಡೆಯುತಿರು
ಮಹಾನಗರವಾಸಿ ಸುರೇಂದ್ರನಿಗೆ
ಅನ್ನು ಎಂದನ್ನುವಳು ನನ್ನ ಮುಂಜಾವು!
-
ಸುರೇಂದ್ರ ಕುಮಾರ್ ಮರ್ನಾಡ್, ಅವರ ಮುಂಜಾವಿನ ಹಾಡು


ಹಿಡಿದಿಡಲಾಗದೆ .. !
ಕೊಲ್ಲಲೂ ಮನಸಾಗದೆ .. !
ಸುಟ್ಟರೂ ಸುಡದ ..!
ಸುಡುಗಾಡು ಈ
ಭಾವನೆಗಳನ್ನ.. !
....ಇಲ್ಲಾ ಎಲ್ಲವನ್ನೂ ಕಿತ್ತೊಗೆದು ಬಂದಿರುವೆ ಈ ಮಹಾನಗರಿಗೆ .. !

ಆದ್ರೆ ದಿನಾ ನೆನಪಾಗೋದು ನನ್ನೂರಿನ ಹನಿ ತುಂಬಿದ ಇಬ್ಬನಿ ಮುಂಜಾವು
ಈಗ ಆ ಹನಿ ಕಣ್ಣಂಚಿನಲಿ ಮಾತ್ರ ತುಂಬಿದೆ
ಇಲ್ಲ್ಲಿಹೆಸರಿನ ಪ್ರೆಶರಿನ ಮುಂಜಾವು 
ಈವಾಗ ಮತ್ತೆ ಆ ಮುಂಜಾವನ್ನು ಸೆರೆಹಿಡಿವ ಬೆಳಕು ಕಣ್ಣಿಂದ ಕಣ್ಮರೆಯಾಗಿದೆ ..ಹುಡುಕುವ ಪರಿ ಹೇಗೆ..?
ಬೊಬ್ಬಿಡಲೇ.. ? ಗಂಟಲಲ್ಲಿನ ಇಂಪು ದ್ರವ ಇಂಗಿಹೋಗಿದೆ..ತುಂಬಿಕೊಳ್ಳುವುದು ಎಲ್ಲಿಂದ..?
ಉಸಿರದು ಆವಿಯಾಗುತ್ತಿದೆ..ತಂಪನ್ನೆರೆಯುವುದು ಎಂತು.. ?
ಅದೇ ಇಬ್ಬನಿ ಮುಂಜಾವು .....ಜೊತೆಗೆ ಭಾವೈಕ್ಯದ ಭಾವನೆ ಪಡೆಯುವ ಪರಿ ದಯವಿಟ್ಟು ತಿಳಿಸುವಿರಾ..................?

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...