ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 August, 2013

ನಾನು ಮತ್ತು ಅವರು!ಅವರು ಮೌನವಾಗಿಯೇ ಸಂವಹನ ಮಾಡುವವರು.. ಮಿತಭಾಷಿ
ನಾನೋ ಬಡಬಡ ಮಾತನಾಡಿ ಖಾಲಿಯಾಗುವ ಧಾವಂತದವಳು... ವಾಚಾಳಿ
ಅವರು ತುಟಿ ಅರಳಿಸದೇ ಕಣ್ಣುಗಳಲ್ಲೇ ನಗು ತೋರುವವರು..
ನಾನೋ ಬಾಯಿ ಬಿಚ್ಚಿ ಮೂವತ್ತೊಂದು ಹಲ್ಲುಗಳನ್ನು ತೋರುತ್ತಾ ನಗುವವಳು..
ಅವರ ನಗುವಿಗೆ ಸದ್ದೇ ಇಲ್ಲ..
ನನ್ನದೋ ಗಹಗಹಿಸಿ ನಗುವ ಅಭ್ಯಾಸ..
ಅವರೋ ಮಾತನಾಡಿದರೇ ವೀಣೆಯ ಝೇಂಕಾರ..
ನನ್ನದೋ ಶೃತಿಯಿಲ್ಲದ ಗಿಟಾರ್ ನಂತಹ ಸ್ವರ..
ಅವರೋ ನಟನೆ, ಸಂಗೀತ, ಸ್ತೋತ್ರ, ಭಜನೆಗಳಲ್ಲಿ ಪರಾಂಗತರಾದರೂ ಕೊಚ್ಚಿಕೊಳ್ಳುವವರಲ್ಲ..
ನಾನೋ ಏನೋ ಅಲ್ಪ ಸ್ವಲ್ಪ ಅರಿತೇ ನನ್ನ ಬಗ್ಗೆ ದಂಡೋರ ಸಾರುವವಳು..
ಇಷ್ಟಿದ್ದೂ ಇಬ್ಬರೂ ಒಂದೇ ಒಂದು ವಿಷಯದಲ್ಲಿ ಸಮಾನರು..
ಭಾವುಕರು.. ಇದೇ ನನ್ನದೂ ಅವರದೂ ಅರ್ಹತೆ!
ಬರೇ ನಾಲ್ಕು ದಿನಗಳ ಜತೆ ಅತ್ಯಂತ ಸಮೀಪ ತಂದಿತು..
ಮತ್ತೆಂದಿಗೂ ದೂರವಾಗದಂತೆ ಭಾಂದವ್ಯ ಬೆಸೆಯಿತು!No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...