ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 July, 2013

ನಲ್ಲನಿಗೆ ನಲ್ಲೆಯ ಮನವನ್ನರಿಯಲು ಅಕ್ಷರಗಳ, ಕಂಠದಿಂದ ಹೊರಡುವ ಶಬ್ದಗಳ ಹಂಗಿಲ್ಲವಂತೆ...

ಕಣ್ಣೆವೆಗಳ ಹಿಂದೆ ಅಡಗಿದ ನಯನಗಳ ಮಾತು ಅವನ ಮನವ ತಲುಪುವುದಂತೆ...

ನಲ್ಲೆಯ ಗೆಜ್ಜೆಯ ನಾದವೂ ಅವಳ ಮನದ ಸ್ವರವಾಗಿ ಅವನ ಕಿವಿಯಲಿ ಉಸುರುವವಂತೆ..

ಅವಳ ಕೈಬಳೆಗಳ ಕಿಂಕಿಣಿಯೂ ಅವಳು ಆಡದ ಮಾತುಗಳ ಮಾರ್ದನಿಸುವುದಂತೆ..

ತಲೆತಗ್ಗಿಸಿ ಕಾಲ್ಬೆರಳಲಿ ಬಿಡಿಸುವ ಚಿತ್ತಾರವೂ ಅವಳ ಮನದ ಚಿತ್ರಣವ ತೋರುವುದಂತೆ..

ನಸುಬಿರಿದ ತುಟಿಯೂ ಮಾಧುರ್ಯದ ಸ್ವರವ ಕೇಳಿಸುವುದಂತೆ...

ಮತ್ತ್ಯಾಕೆ ಗದ್ದಲೆಬ್ಬಿಸುವ ಮಾತುಗಳ, ಅಕ್ಷರಗಳ ಹಂಗು!ನಾದವೂ ಅವಳ ಮನದ ಸ್ವರವಾಗಿ ಅವನ ಕಿವಿಯಲಿ ಉಸುರುವವಂತೆ..

ಅವಳ ಕೈಬಳೆಗಳ ಕಿಂಕಿಣಿಯೂ ಅವಳು ಆಡದ ಮಾತುಗಳ ಮಾರ್ದನಿಸುವುದಂತೆ..

ತಲೆತಗ್ಗಿಸಿ ಕಾಲ್ಬೆರಳಲಿ ಬಿಡಿಸುವ ಚಿತ್ತಾರವೂ ಅವಳ ಮನದ ಚಿತ್ರಣವ ತೋರುವುದಂತೆ..

ನಸುಬಿರಿದ ತುಟಿಯೂ ಮಾಧುರ್ಯದ ಸ್ವರವ ಕೇಳಿಸುವುದಂತೆ...

ಮತ್ತ್ಯಾಕೆ ಗದ್ದಲವೆಬ್ಬಿಸುವ ಮಾತುಗಳ, ಅಕ್ಷರಗಳ ಹಂಗು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...