ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

08 August, 2012

ಹನಿ ಹನಿ ಚಿತ್ತಾರ!


   ಹನಿ ಹನಿ ಮುತ್ತುಗಳು  ಚೆಲ್ಲಾಡಿವೆ ತೋಟದ ತುಂಬಾ...
  ಆರಿಸಿ, ಮಾಲೆಯ ಕಟ್ಟಲು ಅನುವಾದರೆ.....
  ಇಗೋ, ಕುಸುಮಗಳ ಅಪ್ಪಣೆ....
  ತಡೆ, ಅಗೋ ನಮ್ಮೊಡೆಯನು ಹೊನ್ನ ತೇರನೇರಿ ಬರುತಿಹನು..
  ಈ ಮುತ್ತು, ರತ್ನಗಳು ಅವಗೇ ಅರ್ಪಣೆ..
  ತಡಮಾಡಬೇಡ..
  ನಿನ್ನ ಮನೆಯಂಗಳದಲಿ ಹರಡಿಹ ಮುತ್ತುರತ್ನಗಳ..
  ನಿನ್ನ ಮನದಂಗಳದಲಿ  ಶಾಶ್ವತವಾಗಿ ಸೆರೆಯಾಗಿಸು.....
  ಅಷ್ಟೇ ಪ್ರಾಪ್ತಿ ನಿನಗೆ!!! 













2 comments:

Badarinath Palavalli said...

ಒಳ್ಳೆಯ ಸಚಿತ್ರ ಕವನ ಇದು. ರಮ್ಯ ಪರಿಸರದ ನಡುವೆ ಜೀವವನ ಸುಖ ಅನುಭವಿಸುವ ನೀವೆ ಧನ್ಯರು. ನಮ್ಮದೇನಿದೆ ಕಾಂಕ್ರಿಟ್ ಕಾಡು.

Sheela Nayak said...

ನಿಜ ಬದರಿನಾಥ್, ಇಂತಹ ಸುಂದರ ಪರಿಸರ ಮತ್ತು ಪರಿಸರ ಪ್ರೇಮಿ ಹೆತ್ತಮ್ಮಳನ್ನು ಕೊಟ್ಟ ಆ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ! ಮೆಚ್ಚಿದಕ್ಕೆ ಧನ್ಯವಾದ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...