ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 July, 2012

ಶಿಷ್ಯೆಯರ ಕಲೆ!!!


      ೫ವರ್ಷಗಳ ಹಿಂದೆ ಕುಂಚ ಕೈಗೆತ್ತಿಕೊಳ್ಳುವೆ ಎಂದೆಣಿಸಿರಲಿಲ್ಲ...ಒಂದು ವೇಳೆ ಚಿತ್ರ ಮಾಡಿದರೂ ಬೇರೆಯವರಿಗೆ ಕಲಿಸಿಕೊಡುವಷ್ಟು ಸಮರ್ಥಳಾಗುವೆ ಎಂದೂ ತಿಳಿದಿರಲಿಲ್ಲ....ಬರೇ ಚಿಕ್ಕಮಕ್ಕಳಿಗೆ ಮೊನ್ನೆ ತನಕ ಪಾಠ ಮಾಡುತ್ತಿದ್ದ ನಾನು ಇಂದು ನನ್ನ  ಪ್ರೀತಿಯ ತೈಲ ವರ್ಣಗಳನ್ನು ಮಾಡುತ್ತಾ ಅದನ್ನು ಕಲಿಸಲೂ ಪ್ರಯತ್ನಿಸುತ್ತಿದ್ದೇನೆ.  ವಿಚಿತ್ರವೆಂದರೆ ನಾನೆಂದೂ ಚಿತ್ರ ಕಲಿಸುವ ಬಗ್ಗೆ ಪ್ರಚಾರವನ್ನು ಮಾಡಿರಲಿಲ್ಲ....ಅಂದಮೇಲೆ ಇದೂ ನನ್ನೊಡೆಯನ ಇಚ್ಛೆಯೇ ಇರಬೇಕೆಂದು ಅನಿಸುತ್ತಿದೆ..ಅದನ್ನು ಶಿರಸಾ ವಹಿಸಿ ಪಾಲಿಸಲು ಪ್ರಯತ್ನ ಪಡುತ್ತಿದ್ದೇನೆ!

 ಒಂದಂತೂ ಬೇಸರವಿದೆ..ಈಗ ನಾನು ಕಲಿಸುತ್ತಿರುವ ಮಹಿಳೆಯರು ಇನ್ನೂ ಚಿತ್ರ ಬಿಡಿಸಲು ಕಲಿತಿಲ್ಲ..ಆಗಲೇ ಆಕಾಶಕ್ಕೆ ಏಣಿ ಇಡುತ್ತಿದ್ದಾರೆ.....ನೀವಿದ್ದಿರಲ್ಲ  ಅಂತ ಅನ್ನುತ್ತಿದ್ದಾರೆ..ಒಟ್ಟಾರೆ ನನ್ನ ಕೈ ಚಳಕ..ಅವರ ಹೆಸರು ಚಿತ್ರದಲ್ಲಿ..ಇರಲಿ ಇದೂ ನಿನ್ನ ಲೀಲೆಯ ಭಾಗ ಅಲ್ಲವೇ ಗೋಪಾಲಾ!!!




 ಅದೇ ಈ ಐದನೇ ತರಗತಿಯ ಹುಡುಗ ನಿಜವಾದ ಕಲಾಸಕ್ತ...ಪೆನ್ಸಿಲ್ ಕೆಲಸ ಮೊದಲು ಅಂತ ಹೇಳಿದಕ್ಕೆ ಒಪ್ಪಿ ಅದನೇ ಮಾಡುತ್ತಿದ್ದಾನೆ..ಇಂತವರಿಗೆ ಕಲಿಸಲು ಬಹಳ ಖುಶಿಯಾಗುತ್ತೆ...ಹೆಸರು ಶ್ರೀಧರ್ ಶೆಣೈ...

3 comments:

Badarinath Palavalli said...

ಕಲೆಯನ್ನು ಮಕ್ಕಳಿಗೆ ಉಣಬಡಿಸುತ್ತಿರುವ ನಿಮ್ಮ ಗುರುಪರಂಪರೆಗೆ ನನ್ನ ಶರಣು.

Anonymous said...

ಅಕ್ಕ, if you can write an article on how to start oil painting, materials required with some tips, etc., ಒಂಚೂರು ಆಸಕ್ತಿ ಇರೋವ್ರಿಗೆ ಸಹಾಯ ಅಗಬಹುದಲ್ವೆ

Sheela Nayak said...

ಅಷ್ಟು ಸುಲಭವಾ ಕಲೆ ಅಂದ್ರೆ ಕಿರಣ್...ಅದೊಂದು ತಪಸ್ಸು...ಹೀಗ್‍ಹೀಗೆ ಬಣ್ಣ ತುಂಬು..ಹಾಗ್‍ಹಾಗೆ ಬ್ರಶ್ ಎಳೆ ಅಂತ ಹೇಳ್ಲಿಕ್ಕೆ...ನಿಜವಾಗಿ ಅದು ಬರುವುದು ನಮ್ಮ ನಮ್ಮ ಆತ್ಮದಿಂದ..ಅಂದರೆ ಹಿಂದಿನ ಜನ್ಮದ ವಾಸನೆ ಉಳಿದಿದ್ರೆ ಮುಂದಿನ ಜನಮದಲ್ಲೂ ಕಾಣಬಹುದೇ ಹೊರತು ಬರೇ ಕಲ್ತು ಬರುವಂತಹುದಲ್ಲ...ಅಲ್ಲದೆ ಅಂತಹ ವಿಡಿಯೋಗಳು ಯು-ಟ್ಯೂಬ್‍ನಲ್ಲಿ ಬೇಕಾದಷ್ಟು ಇವೆ..ಅಲ್ಲದೆ ನನಗೆ ಏನು ಗೊತ್ತುಂಟು ಅಂತ ನಾನು ಕಲೆಯ ಪಾಠ ಮಾಡ್ಲಿಕ್ಕೆ..ಈಗ ನನ್ನ ಹತ್ತಿರ ಕಲಿಲಿಕ್ಕೆ ಬರುವವರಿಗೂ ಹಾಗೆ ಹೇಳಿದ್ದೇನೆ....ಅಲ್ಲದೆ ನಾನು ಯಾವುದೇ ಪ್ರಚಾರ ಮಾಡದೇ ಬಂದುದರಿಂದ ಅದು ನನ್ನೊಡೆಯ ಇಚ್ಛೆ ಅಂತ ತಿಳಿದು ನನಗೊತ್ತಿದ್ದುದನ್ನು ಅವರಿಗೆ ಹೇಳ್ತಾ ನಾನೂ ಕಲಿಯುತ್ತಾ ಇದ್ದೇನೆ..ಹೊರತು ....
ಇನ್ನು ಬ್ಲಾಗ್‍ನಲ್ಲಿ ಹಾಕೊದು ಅಷ್ಟೇ.ಬರೀ ಆತ್ಮ ತೃಪ್ತಿಗಾಗಿ...ಎಲ್ಲೋ ನಿನ್ನಂತಹ ಸಹೃದಯದವರು ಬಂದು ಒಂದಿಷ್ಟು ಮೆಚ್ಚುಗೆ ನುಡಿ ಹೇಳಿದರೆ ಸಾರ್ಥಕವಾಯಿತೆಂದೆನೆಸುತ್ತದೆ..ಆತ್ಮ ತೃಪ್ತಿಗಾಗಿ ಮಾಡುವುದಾದರೂ ಒಂದೆರಡು ಮನಪೂರ್ವಕವಾಗಿ ಮೆಚ್ಚುವಂತಹ ವೀಕ್ಷಕನೋ, ಕೇಳುವವನೋ, ಓದುವವನೋ ಇದ್ದರೂ ನಮ್ಮಂತವರಿಗೆ ಸಾಕು..ಇಲ್ಲದಿದ್ದರೆ ಅವು ಸುಮ್ಮನೆ ನಾಲ್ಕು ಗೋಡೆಗಳ ಮಧ್ಯೆ ನೇತಾಡುತಿರುತ್ತವೆ...ವೀಕ್ಷಕರಿಲ್ಲದೆ...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...