ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 February, 2012

ಮಾವಿನ ಹೂವು ಮತ್ತು ಕೋಗಿಲೆಯ ಕುಹೂ ಕುಹೂ!



 ಯಾಕೋ ಬೆಳಿಗ್ಗೆಯಿಂದ ಕೋಗಿಲೆಯೊಂದು ಒಂಟಿಯಾಗಿ ಕುಹೂ ಕುಹೂ ಎನ್ನುತ್ತಾ ಹಾಡುತಿತ್ತು...ಅದ್ಯಾಕೆ ಇವತ್ತು ಒಂದೇ ಹಾಡುತ್ತಿದೆ..ಉಳಿದವುಗಳ ಸ್ವರ ಕೇಳುತ್ತಿಲ್ಲ ....ನೋಡಲೆಂದೇ ಕೆಮರಾ ಹಿಡಕೊಂಡು ಹೊರ ಬಂದರೆ ಕೋಗಿಲೆ ಕಾಣುತ್ತಿಲ್ಲ..ಅದರ ಸ್ವರ ಮಾತ್ರ ಕೇಳುತ್ತಿದೆ ಮಾವಿನ ಮರದ ತುದಿಯಿಂದ.  ಪ್ರಿಯತಮೆ/ತಮನ ಜೊತೆ ಕಲಹ ಮಾಡಿಕೊಂಡು ಬೇರ್ಪಟ್ಟಿದೆಯೆಂದು ಕಾಣುತ್ತದೆ. ಸರಿ, ಇವುಗಳ ಮುನಿಸು ಸ್ವಲ್ಪ ಸಮಯದಲ್ಲೇ ಸರಿ ಹೋದಿತು ಅಂದುಕೊಂಡು ನಾನು ಎಷ್ಟೋ ದಿನಗಳಿಂದ ತೆಗೆಯಬೇಕೆಂದುಕೊಂಡಿದ್ದ  ಮಾವಿನ ಹೂಗಳ ಛಾಯಾಚಿತ್ರ ತೆಗೆಯುವ ಕೆಲಸ ಮಾಡಿದೆ.







                   ಹೂವಿನ ತೇರುಗಳಿಂದ ತುಂಬಿ ಮಾವಿನ ಮರವು ಅವುಗಳ ಭಾರದಿಂದ ಜಗ್ಗಿದೆಯೋ ಎಂಬಂತೆ ಕಾಣುತ್ತಿದೆ.. ಇನ್ನೊಂದು ಮರದಲ್ಲಿ ಆಗಲೇ ಮಿಡಿ ಕಾಯಿಗಳು ಇಣುಕುತ್ತಿವೆ. ಮುಸ್ತಾಫ ಬ್ಯಾರಿ ಈಗಾಗಲೇ ಮೂರು ನಾಲ್ಕು ಸಾರಿ ಸರ್ವೆ ಮಾಡಿಕೊಂಡು ಹೋಗಿದ್ದಾನೆ. ಹೂಗಳನ್ನು ನೋಡಿದರೆ ಹಿಂದಿನ ವರ್ಷಕ್ಕಿಂತ ಈ ಸಾರಿ ಫಸಲು ಜಾಸ್ತಿ ಬರುವುದೆಂದು ಕಾಣುತ್ತದೆ.









                    ಈ ಲೇಖನ ಬರೆಯುತ್ತಿದ್ದಂತೆ ಬೆಳಗ್ಗೆ ಒಂಟಿಯಾಗಿ ತನ್ನಿಯನ ಕರೆಯುತ್ತಿದ್ದ ಕೋಗಿಲೆಯ ಜೊತೆಗಾರ ಬಂದನೆಂದು ಕಾಣುತ್ತದೆ..ಹರ್ಷದಿಂದ ತುಂಬಿದ ಸ್ವರದಿಂದ ಕೋಗಿಲೆವೆರಡು ಉಲಿಯುವುದು ಕೇಳಿಸುತ್ತಿದೆ.  ನನ್ನ ಮನಸ್ಸಿಗೂ ಉಲ್ಲಾಸ ತುಂಬಿತು.  ನಮ್ಮ ಮನೆಯ ಬಳಿ ಪಾರಿವಾಳಗಳು ತುಂಬ ಕಮ್ಮಿ...ಆದರೆ ಕೋಗಿಲೆ ಸಾಧಾರಣವಾಗಿ ಯಾವಾಗಲೂ ಕಾಣಿಸಿಕೊಳ್ಳುತ್ತದೆ. ಆದರೆ ಅವುಗಳ ಕುಹೂ ಕುಹೂ ನಾದ ಮಾತ್ರ ಕೇಳುವುದು ವಸಂತ ಮಾಸದಲ್ಲಿ ಮಾತ್ರ..ಕೆಲವೊಮ್ಮೆ ಮಳೆಗಾಲದಲ್ಲೂ ಅಪರೂಪವಾಗಿ ಕೇಳಿದ್ದೇನೆ. ನಾನಂದು ಕೊಳ್ಳುವುದಿತ್ತು..ಫ್ಲಾಟಿನವರು ತುಂಬಾನೆ ಲಕ್ಕಿ..ಅವರ ಮನೆಗೆ ಮಾತ್ರ ಪಾರಿವಾಳಗಳ ಭೇಟಿ...ನನಗೆ ಅವುಗಳ   ಛಾಯಾ ಚಿತ್ರ ತೆಗೆಯಬೇಕೆನ್ನುವ ಆಸೆ..ಆದರೆ ನಮ್ಮ ಅಂಗಳದಲ್ಲಿಯೇ ಯಾವಾಗಲೂ ಹುಳಹುಪ್ಪಟೆಯ ಬೇಟೆ  ಯಲ್ಲಿರುವ ಕೋಗಿಲೆಯ ಒಂದಾದರೂ ಫೋಟೋ ತೆಗೆಯಲಿಲ್ಲ ನಾನು. ಅಂತೇಯೇ ರಾಬಿನ್ ಕೂಡ ನಮ್ಮಲ್ಲಿಯೇ ಡೇರೆ ಹೂಡುತ್ತವೆ. ಛೆ! ನಮ್ಮಲ್ಲಿದ್ದುದು ನಮಗೆ ಕಾಣಿಸುವುದಿಲ್ಲ!  ಆದರೆ ಇವತ್ತು ಕೋಗಿಲೆ ಎಷ್ಟು ಕಾದು ನಿಂತರೂ ಕಾಣಿಸಿಕೊಳ್ಳಲಿಲ್ಲ...ಕಾಗೆಯ ಚಿತ್ರ ತೆಗೆದು ಸಮಾಧಾನ ಪಡಬೇಕಾಯಿತು..ಎಲ್ಲಿ ಹೋಗ್ತಿ ನೀ ? ಒಂದಲ್ಲ ಒಂದು ದಿನ ನಿನ್ನನ್ನು ನನ್ನ ಕೆಮರಾದಲ್ಲಿ ಬಂಧಿಸಿಯೇ ಬಂಧಿಸ್ತಿನಿ ಎಂದು ಪ್ರತಿಜ್ಞೆ ಮಾಡಿಕೊಂಡೇ ಮನೆಯೊಳಗೆ ಬಂದೆ.



8 comments:

kiran said...

ಎಂತಹ ವ್ಯರುಧ್ಯ
ನಮ್ಮನೆ ಹತ್ರ ತುಂಬಾ ಪಾರಿವಳಗಳಿವೆ, ಕೋಗಿಲೆಗಳೇ ಇಲ್ಲ ಕಣ್ರೀ

kiran said...

ಏನೀ ಸಂಬಂಧಗಳು...? ಯಾಕೀ ಸಂಬಂಧಗಳು...?
(ನಿದ್ರೆ ಬರದ ರಾತ್ರಿಯಲಿ ಕಾಡಿದ ಪ್ರಶ್ನೆ )
Everything happens for a reason ಅಂತಾರೆ, ಆದ್ರೆ ಜೀವನದಲ್ಲಿ ಕೆಲವೊಂದು ಸಂಬಂಧಗಳು ಯಾಕಾಗ್ತವೋ ಅಂತ ಕಾಡ್ತಿದೆ ರಾತ್ರಿಯಿಂದ
My neighbors ಇಬ್ರಿಗೆ (of course relations ) ನಿನ್ನೆ ರಾತ್ರಿ ಯಾವುದೊ ಕಾರಣಕ್ಕೆ ಜಗಳವಾಗಿ, ಒಂದು ಸಂಸಾರ ಆ ಮಧ್ಯ ರಾತ್ರಿಯಲ್ಲೇ ಮನೆ ಬಿಟ್ಟು ಬೇರೆಡೆ ಹೊರಟು ಹೋದರು.
ಆಗಲೇ ನನಗೆ ತಿಳಿದದ್ದು ಆ ಮನೆಯ 3 ವರ್ಷದ ಪಾಪು DISHA ಳನ್ನು ನಾನು ಎಷ್ಟು ಹಚ್ಹಿಕೊಂಡಿದ್ದೆ ಎಂದು.
ಮತ್ತೆಂದೂ ಅವಳ ಜೊತೆ ಇರೋಕಾಗಲ್ಲ...
ಮತ್ತೆಂದೂ ಅನ್ನೋ ಶಬ್ದ ಮಾರ್ದನಿಸುತ್ತಿದ್ದರೆ, ಎದೆ ಧಸಕ್ ಎನ್ನುತ್ತಿದೆ.
ಗಂಡಸರು ಅಳಬಾರದೆಂದು rules ಬೇರೆ ಇದ್ಯಲ್ಲ. The pain inside is simply unbearable for this moment at least
ಬಹುಷಃ ಬರೆಯೋದೂ ಅಳುವ ಇನ್ನೊಂದು ರೂಪವೇನೋ...
ಇಂತಹ ಅದ್ಭುತ ಸಂಬಂಧಗಳಿಗೆ ಹೆಸರಿನ ಹಂಗಾದರೂ ಯಾಕೆ ಬೇಕು ಅಲ್ವ
ಹರಿಯೋ ನೀರಿನ ರೀತಿಯ ಈ ಸಂಬಂಧಗಳು ಜನ್ಮ ತಾಳುತ್ತವೆಯಾದರೂ ಏಕೆ?
...............ಪುಟ್ಟ ಮನಸಿನ ತೆರೆದ ಮಾತುಗಳಿವು

Sheela Nayak said...

ಕಿರಣ್, ತೆರೆದ ಮನಸಿನ ಪುಟಗಳಿಗೆ ಸ್ವಾಗತ!

ಹಾಂ, ಈ ಜೀವನವು ಹಲವು ವೈರುಧ್ಯಗಳಿಂದ ಕೂಡಿದೆ...ಇಲ್ಲದಿದ್ದರೆ ಅದಕೇನು ಸೊಗಸು?
ನಾನಂತೂ ಇಷ್ಟು ವರ್ಷಗಳಿಂದ ಕೋಗಿಲೆ ನಾದ ಕೇಳಿಯೇ ಬೆಳೆದವಳು..ಪಾರಿವಾಳಗಳು ನಮ್ಮ ಮನೆಯ ಬಳಿ ಇರುವ ಫ್ಲಾಟಿನ ಕಿಟಿಕಿಯ ಬಳಿ ಕಾಣುತ್ತಿರುತ್ತೇನೆ. ಗುಬ್ಬಚ್ಚಿಗಳು ನಮ್ಮ ಅಂಗಳದಲ್ಲಿ ಕುಪ್ಪಳಿಸುತ್ತ ಆಡುತ್ತಿದ್ದವು ಒಂದು ಕಾಲದಲ್ಲಿ...ಈಗ ಮಟ್ಟಮಾಯ!

Sheela Nayak said...

ಕಿರಣ್,

ಕೆಲವೊಂದು ವಿಷಯಗಳು ನಮ್ಮ ಕೈ ಮೀರಿ, ಮನಸ್ಸು ಮೀರಿ ನಡೆಯುತ್ತವೆ....ಭಾವನೆಗಳು ಗಂಡು ಹೆಣ್ಣು ಎಂದು ಬೇಧ ಮಾಡಿ ಬರುವುದಿಲ್ಲ... ನಮಗೊತ್ತಿಲ್ಲದೆಯೇ ಕೆಲವೊಂದು ಸಂಬಂಧಗಳು ಬೆಸೆದುಕೊಳ್ಳುತ್ತವೆ...ಅದರಿಂದ ಹೊರ ಬರಲು ಕಷ್ಟ....ಕಾಲವೇ ಅದಕ್ಕೆ ಉತ್ತರ ಕೊಡುತ್ತದೆ! ಭಾವನಾತ್ಮಕ ಜೀವಿಗಳಂತೂ ತೀರ ಹಚ್ಚಿಕೊಂಡು ಕೊರಗುತ್ತಾರೆ....ಅಂತವರು ಮಾತ್ರ ಬಹಳ ವಿರಳ ಈ ಕಲಿಗಾಲದಲ್ಲಿ!

kiran said...

Thanks a ton for taking time from your busy schedule to write me back...

Sheela Nayak said...

ರೀ ಕಿರಣ್,

"ತೆರೆದ" ಶಬ್ದಕ್ಕೆ ನಾನೇನು ಪೇಟೆಂಟ್ ಮಾಡಿಕೊಂಡಿಲ್ಲ!!! :-)) ನೀವು ಧಾರಾವಾಳವಾಗಿ ಉಪಯೋಗಿಸ್ಬಹುದು!

kiran said...

hahaha... okay :):)

Sheela Nayak said...

Kiran,

There is no need to say thanks...in fact I shud say thanks to u for ur nice comments...

Though I really dont expect any comments as I just write to ease my mind & heart...but if some kind hearts drop in to comment, I do welcome them heartily!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...