ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 September, 2011

ಸಂಪದದಲ್ಲಿ ಕೇಳಿದ ಸಲಹೆಗೆ...ತೆರೆದ ಮನಸಿನ ಪುಟದಲ್ಲಿ ...ಕೆಲವೊಂದು ಮಾತುಗಳು!!!

          ಸಂಪದದಲ್ಲಿ ಕೇಳಿದ ಸಲಹೆಗೆ...ತೆರೆದ ಮನಸಿನ ಪುಟದಲ್ಲಿ ...ಕೆಲವೊಂದು ಮಾತುಗಳು!!! ಮನು ಬರಹವನ್ನು ಅಳಿಸಿಹಾಕಿದುದರಿಂದ,... ಅದಕ್ಕೆ ಬಂದ ಸಂಪದಿಗರ ಕಮೆಂಟುಗಳಿಂದಲೇ ನನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದೇನೆ...         kavinagaraj

ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ಬಹುಷಃ ಯಾರೂ ಸಲಹೆ ಕೊಡಲಾರರೆಂದು ಅನ್ನಿಸುತ್ತದೆ - ನನ್ನನ್ನೂ ಸೇರಿಸಿ-
     *********************************************************************

     ವಿಜಯ್ ಪೈ
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ಮನು..
ಇದು ನಿಮ್ಮದೆ ನೈಜ ಕಥೆಯಾಗಿದ್ದರೆ..

- ಇಷ್ಟೆಲ್ಲ ಮಾಡಿದ್ದೇನೆ, ಇನ್ನೂ ಮಾಡುತ್ತಿದ್ದೇನೆ. ನನಗೆ ತ್ಯಾಗಿ, ತುಂಬಾ ಒಳ್ಳೆಯವನು ಅನ್ನುವ ಪಟ್ಟ ಸಿಗಬೇಕು ಎನ್ನುವ ಹಂಬಲ ನಿಮಗಿದ್ದರೆ ನೀವಿನ್ನು ಸಿನೇಮಾ/ಕಾದಂಬರಿ ಜಗತ್ತಿನಲ್ಲಿದ್ದೀರಿ. ಈ ರೀತಿಯಾಗಿ ಸ್ವಾನುಕಂಪದಿಂದ ನರಳುವದರಿಂದ ನಷ್ಟ ನಿಮಗಯೇೆ ಹೊರತು ಬೇರೆಯವರಿಗಲ್ಲ.

- ಯಾವುದೇ ಸಂಬಂಧವಿರಲಿ ಒಂದು ಮಟ್ಟಿಗಿನ ಅಂತರ ಕಾದುಕೊಂಡೆ ಇರಬೇಕು. ಅತಿಯಾಗಿ ಹಚ್ಚಿಕೊಳ್ಳುವುದು, ಹತ್ತಿರ ಹೋಗುವುದು ನಿಮ್ಮ ಜೊತೆಗಾರರ ಉಸಿರು ಕಟ್ಟಿಸುತ್ತದೆ..ನಿಮ್ಮಿಂದ ದೂರ ಓಡಿಹೋಗುವಂತೆ ಮಾಡುತ್ತದೆ. ಅವರಿಗೆ ಉಸಿರಾಡಲು ಜಾಗ ಬಿಡಿ.

- ಸಹಾಯ ಎಂಬುದು ನೀವೇ ದಿನವೂ ಮೀನನ್ನು ಹಿಡಿದು, ಸಾರು ಮಾಡಿ ತಿನ್ನಿಸುವುದಲ್ಲ..ಬದಲಿಗೆ ಅವರ ಬದುಕನ್ನು ಅವರಾಗಿಯೇ ಕಟ್ಟಿಕೊಳ್ಳಲು ಸಹಾಯವಾಗುವಂತೆ ಮೀನನ್ನು ಹಿಡಿಯಲು, ಸಾರು ಮಾಡಿಕೊಳ್ಳಲು ಕಲಿಸುವುದು. ಆ ಮನುಷ್ಯನಿಗೆ ಇದನ್ನು ಕಲಿಯುವ ಮನಸ್ಸಿಲ್ಲದಿದ್ದರೆ ಮುಲಾಜಿಲ್ಲದೇ ದೂರ ಮಾಡುವುದು.

- ನಿಮ್ಮದು ' ಸ್ವಪರಿಶ್ರಮ'ದಿಂದ ಕಷ್ಟಪಟ್ಟು ಸೃಷ್ಟಿಸಿಕೊಂಡ ಗೋಳಿನ ಕಥೆ!. ಗೋಳು, ಸ್ವಾನುಂಕಪದ ಕಥೆಗಳಿಗೆೆ ಈ ಜಗತ್ತಿನಲ್ಲಿ ಗಿರಾಕಿಗಳು ಕಡಿಮೆ. ಇದು ಇನ್ನೂ ಮುಂದುವರಿದು, ರಾಮಾಯಣವಾಗಿ ನೀವು ಇನ್ನಷ್ಟು ಮೂರ್ಖರು ಎನಿಸಿಕೊಳ್ಳುವ ಮೊದಲೇ ಈ ಕೂಪದಿಂದ ಹೊರಬನ್ನಿ. ಆ ಸ್ನೇಹಿತನ ಹೊರತಾಗಿಯೂ ನಿಮಗೊಂದು ಬದುಕು, ಉಳಿದ ಸ್ನೇಹಿತರು, ಮಾಡಲು/ತೊಡಗಿಕೊಳ್ಳಲು ಕೆಲಸಗಳಿವೆ ಎಂದುಕೊಂಡಿದ್ದೇನೆ.

ಕೊನೆಯದಾಗಿ ಸಂತೋಷ ಕೊಡುವಂತಹ, ಜೀವನೋತ್ಸಾಹ ತುಂಬುವ ಸಂಗೀತ ಕೇಳಿ. 'ಇದು ಯಾರು ಬರೆದ ಕಥೆಯೋ..ನನಗಾಗಿ ಬಂದ ವ್ಯಥೆಯೋ~' ತರಹದ ಹಾಡುಗಳ ಹತ್ತಿರ ಸುಳಿಯಲೇ ಬೇಡಿ!. ಬರೆದಿದ್ದು ಕಠೋರವೆನಿಸಿದರೆ ಕ್ಷಮೆಯಿರಲಿ. ಒಳ್ಳೆಯದಾಗಲಿ ನಿಮಗೆ :)
******************************************************************

ಗಣೇಶ
04
Sep
2011
11:10
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

+೧
ಗಣೇಶ.
*********************************************************************

ಸತ್ಯ ಚರಣ ಎಸ್. ಎಂ.
05
Sep
2011
1:12
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

+೧

ಒಮ್ಮೆ ಈ ಸಂಬಂಧ ಮತ್ತು ವ್ಯಕ್ತಿಯಿಂದ ದೂರ ಉಳಿದು ನೋಡಿ.. ಹೇಗೆ.. ಹೆಜ್ಜೆಗಳು ಇಂತಿವೆ..

    ಮೊದಲು ಅದರ ಸಾಧ್ಯಾಸಾಧ್ಯತೆಯ ಬಗ್ಗೆ ಸಂಪೂರ್ಣ ಕಲ್ಪನೆಯನ್ನ ನಿಮ್ಮ ಮನಸ್ಸಿಗೆ ತಂದುಕೊಳ್ಳಿ.. ಅಂದರೆ, ಏನೇನು ಆಗುತ್ತದೆ, ಎನೇನು ಹೋಗುತ್ತದೆ ಅನ್ನೋದನ್ನ ಸಂಪೂರ್ಣವಾಗಿ ಮನಸ್ಸಿಗೆ ತಂದುಕೊಳ್ಳಿ.
    ಕೇವಲ ಒಂದು ವಾರ ಇರುವೆ ಅವನಿಂದ ದೂರವಾಗಿ ಅಂದುಕೊಳ್ಳಿ ಹಾಗು ಕೇವಲ ಒಂದು ವಾರಕ್ಕಾಗಿ ಪ್ರಯತ್ನಿಸಿ.
    ಇನ್ನೊಂದು ಸ್ವಲ್ವ ದಿವಸ ಇದನ್ನ ಮುಂದುವರೆಸಿ ನೋಡುವ ಅಂದುಕೊಂಡು ಅದನ್ನ ಮುಂದುವರಸಲು ಪ್ರಯತ್ನಿಸಿ.
    ನಂತರ ಅದು ತಾನಾಗಿ ಅಭ್ಯಾಸವಾಗತೊಡಗುತ್ತದೆ. ಕಷ್ಟ ಅನಿಸದು.
    ಮುಖ್ಯವಾಗಿ.. ನಿಮ್ಮ ಅವಶ್ಯಕತೆ ಇರೋ ಜನ, ನಿಮ್ಮೆಡೆ ಗಮನ ನೀಡೋ ಹಲವು ಜನರಿರೋದನ್ನ ಗಮನಿಸಿ, ಅವರೆಡೆ ನಿಮ್ಮ ಗಮನ ಹರಿಸಿ.
    ಅವನೊಬ್ಬನಿದ್ದ ಅನ್ನೋದು ಒಂದು ಇತಿಹಾಸ ಆಗೋಗುವುದನ್ನ ಸಂಪದಲ್ಲಿ ಮತ್ತೊಮ್ಮೆ ಹಂಚಿಕೊಳ್ಳಿ..

......:-)ನಿಮ್ಮೊಲವಿನ,

ಸತ್ಯ.. :)

****************************************************************************ಮನು
05
Sep
2011
4:08
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ಧನ್ಯವಾದಗಳು ಸತ್ಯ. ನಿಮ್ಮ ಸಲಹೆಗಳನ್ನು ಖಂಡಿತಾ ಸ್ವೀಕರಿಸುತ್ತೇನೆ.

   ***********************************************************


ಮನು
05
Sep
2011
4:16
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ವಿಜಯ್ ನಿಮ್ಮ ಸಲಹೆ ಸರಿಯಾಗಿದೆ ಅನಿಸುತ್ತಿದೆ. ಧನ್ಯವಾದಗಳು.

   ******************************************************************


ಆಸು ಹೆಗ್ಡೆ
05
Sep
2011
11:29
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ಮನು,

ಕಥೆ ಚೆನ್ನಾಗಿದೆ.

ತಾವು, ಪ್ರಯತ್ನಿಸಿದರೆ, ಸುದೀರ್ಘ ಕಾದಂಬರಿಯನ್ನೇ ಬರೆಯಬಹುದು.

ಕಥಾನಾಯಕ/ನಾಯಕಿ ಹೆಣ್ಣೋ ಗಂಡೊ ಅನ್ನುವುದನ್ನು ಅರಿಯದಿರುವ ನನಗೆ ಇಂತಹ ಏಕಮುಖವಾದ ಸಂವೇದನಾಭರಿತ ಮಾತುಗಳಿಗೆ ಸ್ಪಂದಿಸುತ್ತಾ ಸಲಹೆ ನೀಡುವುದು ಕಷ್ಟವೇ!

ಒಂದು ಪಕ್ಷ ಇದೆಲ್ಲಾ ನಿಜವೇ ಆಗಿದ್ದಿದ್ದಲ್ಲಿ:

ನಾವು ಯಾರಿಗಾದರೂ ನೀಡಿದ ಐವತ್ತು ರೂಪಾಯಿಯನ್ನು ಮರಳಿ ಕೊಡದವರಿಗೆ, ಮತ್ತೆ ಮತ್ತೆ ಸಾಲ ನೀಡದ ಅಥವಾ ಸಹಾಯ ಮಾಡದ ಜನರೇ ತುಂಬಿರುವ ಈ ಕಾಲದಲ್ಲಿ, ಗೊತ್ತಿದ್ದೂ ಗೊತ್ತಿದ್ದೂ ಕೈಖಾಲಿ ಮಾಡಿಕೊಂಡವನಿಗೆ ಯಾವುದೋ ಉದ್ದೇಶಗಳಿರಬಹುದೆಂದು ಅನುಮಾನಪಡುತ್ತೇನೆ ನಾನು.

ಒಂದು ವೇಳೆ ಅದು ನಿಸ್ವಾರ್ಥ ಸಹಾಯವಾಗಿದ್ದಿದ್ದಲ್ಲಿ, ಸಹಾಯ ಪಡೆದವರಿಂದ ನಾವು ಕೃತಜ್ಞತಾಭಾವವನ್ನೂ ನಿರೀಕ್ಷಿಸುವ ಅಗತ್ಯ ಇಲ್ಲ.

ಬಲಗೈ ಮಾಡಿದ ದಾನ ಎಡಗೈಗೂ ಗೊತ್ತಾಗಬಾರದಂತೆ.

ತಾವು ಇಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಅವಲತ್ತುಗಳನ್ನು ಹೇಳಿಕೊಳ್ಳುತ್ತಿರುವುದೇ ಸಮಂಜಸವಲ್ಲ.

-ಆಸು ಹೆಗ್ಡೆ

*************************************************************************


ಮನು
05
Sep
2011
4:08
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ನಿಮ್ಮ ಮಾತೂ ನಿಜ ಅನಿಸುತ್ತೆ. ಅದಕ್ಕೆ ಬರಹವನ್ನು ಅಳಿಸುತ್ತಿದ್ದೇನೆ. ಧನ್ಯವಾದಗಳು.
*********************************************************************


ಆಸು ಹೆಗ್ಡೆ
05
Sep
2011
4:43
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ಆಹಾ, ಮೂರು ಪ್ರತಿಕ್ರಿಯೆಗಳಿಂದಲೇ ಅಷ್ಟು ಬೇಗ ಜ್ಞಾನೋದಯವಾಯ್ತೋ ...?!
ಕಿಸೆ ಮತ್ತು ಕೈಖಾಲಿಯಾಗುತ್ತಿರುವಾಗ ಅರಿವು ಮೂಡಲು ಯಾಕೆ ತಡವಾಯ್ತೋ...?!
:) :)

    *********************************************************************


ಪಾರ್ಥಸಾರಥಿ
05
Sep
2011
8:10
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

:))) :)))

   
**********************************************************************

ಮನು
06
Sep
2011
8:03
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ಸರ್, ಸತ್ಯ್ ಮತ್ತು ವಿಜಯ್ ರವರ ಸಲಹೆಗಳಂತೆ ನಡೆದುಕೊಳ್ಳಬೇಕೆಂದು ನಾನು ಮೊದಲೇ ಅನೇಕ ಬಾರಿ ಅಂದುಕೊಂಡಿದ್ದೆ, ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮತ್ತೆ ಅವನು ಸರಿಯಾಗಬಹುದೆಂದು ಅಂದುಕೊಳ್ಳುತ್ತಿದ್ದೆ. ಹಾಗಾಗಿ ಮೂರೇ ಪ್ರತಿಕ್ರಿಯೆಗಳಿಂದ ಜ್ನಾನೋದಯ ಅಂತ ಅಲ್ಲ, ನನ್ನ ನಿರ್ಧಾರ ಸರಿ ಅಂತ ನೆಮ್ಮದಿಯಾಯ್ತು. ಕೆಲವೊಂದು ಸಲ ನಾವು ಒಬ್ಬರನ್ನು ಅರ್ಥಮಾಡಿಕೊಳ್ಳಲು ತುಂಬಾ ಸಮಯ ಹಿಡಿಸುತ್ತೆ ಅಂತ ನನಗನ್ನಿಸುತ್ತೆ. ವಂದನೆಗಳು ಸರ್.
****************************************************************
  
ಆಸು ಹೆಗ್ಡೆ
05
Sep
2011
5:12
ಉ: ನಿಮ್ಮ ಸಲಹೆಗಳು ಬೇಕಾಗಿತ್ತು...

ತಿದ್ದುಪಡಿ:

<<<ತಾವು ಇಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಅವಲತ್ತುಗಳನ್ನು ಹೇಳಿಕೊಳ್ಳುತ್ತಿರುವುದೇ ಸಮಂಜಸವಲ್ಲ.>>>

        *****************************************************************
ಮನವೆಂಬ ನೌಕೆ ಭಾವನೆಗಳೆಂಬ ಬಿರುಗಾಳಿಗೆ ಸಿಲುಕಿ ಸಿಮಿತ ಕಳಕೊಳ್ಳುತ್ತವೆ!


        "ನಿಮ್ಮ ಸಲಹೆ ಬೇಕಾಗಿತ್ತು" ಈ ಶೀರ್ಷಿಕೆ ಮೊನ್ನೆ ಸಂಪದದಲ್ಲಿ ನನ್ನ ಗಮನ ಸೆಳೆಯಿತು ಮತ್ತು ಕುತೂಹಲದಿಂದ ನನ್ನ ಕೈಗಳು ಆ ಬರಹ ಮೇಲೆ ಮೌಸನ್ನು ಒತ್ತಿತು. ಕರುಣಾಜನಕ ಕಥೆಯೆನಿಸಿತು... ಇದೇ ಎಳೆಯಿರುವ ಕತೆಯನ್ನು ಓದಿದ ನೆನಪಾಯಿತು.. ಸಲಹೆ ಕೊಡಬೇಕೆಂದುಕೊಂಡೆ... ಮತ್ತೆ ತಡೆದೆ.. ನನ್ನ ಕವನದ ಗುಂಗಿನಲ್ಲಿ ಆ ವಿಷಯ ಮತ್ತೆ ನೋಡಿದರಾಯಿತು ಅಂದುಕೊಂಡೆ... ನಿನ್ನೆ ಮತ್ತೆ ಕುತೂಹಲದಿಂದ ನೋಡಿದಾಗ ಬರಹ ಮನು ಅಳಿಸಿ ಹಾಕಿದ್ದರು.. ಇದಕ್ಕೆ ಬಂದ ಪ್ರತಿಕ್ರಿಯಗಳನ್ನು ನೋಡಿ, ನನಗೆ ಇದರ ಬಗ್ಗೆನೇ ಬರೆಯಬೇಕೆಂದೆನಿದೆ... ಆದರೆ ನೀವೆಲ್ಲಾ ಅದನ್ನು ಹೇಗೆ ಸ್ವೀಕರಿಸುತ್ತಿರೋ??? ಆದರೂ ಮನುವಿನ ಮನಸ್ಸನ್ನು ನಾನು ಚೆನ್ನಾಗೆ ಅರಿತ್ತಿದ್ದೇನೆಂಬ ಭ್ರಮೆಯಿಂದ ಅವರಿಗೊಂದು ಮತ್ತು ಪ್ರತಿಕ್ರಿಯಿಸಿದವರಿಗೆ  ನನ್ನ ಬಹಿರಂಗ ಪತ್ರ!

     ಇದಕೊಂದು ಪ್ರತಿಕ್ರಿಯೆ ಬರೆಯುವ ಮೊದಲು ಮನುವಿನ ಹಿಂದಿನ ಬರಹಗಳನ್ನು ನೋಡಿದಾಗ... ಏನಾಶ್ಚರ್ಯ??? ಅದೂ ಕೂಡ ಅವರು ಸ್ನೇಹಿತನ ಬಗ್ಗೆಯೇ ಬರೆದದ್ದು.. ಆ ಸ್ನೇಹಿತನು ನಿಜವಾಗಿ ದುರಾದೃಷ್ಟವಂತ ಅನಿಸಿದ್ದು ಸುಳ್ಳಲ್ಲ.  ಇದಕ್ಕೆನೇ ಹೇಳುವುದು... ಕೆಲವೊಂದು ಸಲ ನಮಗೆ ಕೆಲವರನ್ನು ಕಂಡರೆ ಅಪಾರ ಪ್ರೀತಿ.. ಅದೇ ಮತ್ತೆ ಕೆಲವರಂದರೆ ವಿನಾ ಕಾರಣ ದ್ವೇಷ... ಬಹುಶಃ ಮನೋಶಾಸ್ತ್ರಜ್ಞರ ಬಳಿ ಇದಕ್ಕೆ ಸಮಂಜಸವಾದ ಉತ್ತರ ದೊರೆಯಬಹುದೇನೋ? ಮನಶಾಸ್ತ್ರದ ಬಗ್ಗೆ ನನಗಿರುವ ಒಲವಿಂದ ನಾನು ಮನುವನ್ನು ಅರ್ಥ ಮಾಡಿಕೊಡಿದ್ದೇನೆಂದು ಅಂದುಕೊಂಡಿದ್ದೇನೆ.  ಅವರಿಗೆ ಗೆಳೆಯನಿಗೆ ತಮ್ಮ ಬಗ್ಗೆ ಇರುವ ಅನಾದರ ಬಗ್ಗೆ ಗೊತ್ತಿಲ್ಲವೇನೆಂದಿಲ್ಲ... ಆದರೂ ಸ್ನೇಹಿತನ ಬಗ್ಗೆ ಅಪಾರವಾದ ನಿರೀಕ್ಷೆ! ಇಂದಲ್ಲಾ ನಾಳೆಯಾದರೂ ಸ್ನೇಹಿತನು ತಮ್ಮನ್ನು ಅರ್ಥ ಮಾಡಿಕೊಳ್ಳುವನೆಂಬ ಭ್ರಮೆ! ಆಶಾವಾದಿಯಾದ್ದರೂ ಕೆಲವೊಂದು ಸಲ ಇದರ ಬಗ್ಗೆ ಮನಸು ಬಿಚ್ಚಿ ಮಾತನಾಡಲು, ತಮ್ಮ ಭಾವನೆಗಳನ್ನು ಅನುಭವಿಸಲು ಜೊತೆಗಾರನ ಹುಡುಕಾಟದಲ್ಲಿದ್ದ ಅವರಿಗೆ ಈ ಸಂಪದದ ವೇದಿಕೆ ಒಂದು ಓಯಸಿಸ್ ಎಂಬಂತೆ ತೋರಿದರೆ ಆಶ್ಚರ್ಯವೇನಿಲ್ಲ.

  ಬಹುಶಃ ಸಂಪದದಲ್ಲಿ ಬಂದ ಪ್ರತಿಕ್ರಿಯ ಬಳಿಕವೂ ಅವರು ತಮ್ಮ ಮಿತ್ರನ ಮೇಲಿರುವ ಭಾವನೆಗಳನ್ನು ಬದಲಿಸಲು ಸಾಧ್ಯವಾಗಿರುವುದಿಲ್ಲ. ಮನು ನನಗೆ ಗೊತ್ತು... ನೀವು ಬಹಳ ಬೇಸರದಲ್ಲಿದಿರೆಂದು... ನೋಡಿ, ಜೀವನದಲ್ಲಿ ಒಬ್ಬಬ್ಬರಿಗೊಂದೊಂದು ಕಷ್ಟ... ಒಂದು ದೊರೆತರೆ... ಮತ್ತೊಂದು ಬೇಕೆಂಬಾಸೆ. ಇದಕ್ಕೆ ಮಿತಿಯೇ ಇಲ್ಲ. ಆದುದರಿಂದ ನಾನು ತಮಗೆ ಕೊಡುವ ಸಲಹೆಯೇನೆಂದರೆ... ಆದಷ್ಟೂ ಸ್ಥಿತಪ್ರಜ್ಞರಾಗಿರಲು ಪ್ರಯತ್ನಿಸಿ... ಸುಲಭವಲ್ಲ.. ಆದರೂ ಅದರೂ ಪ್ರಯತ್ನ ಪಡಿ.. ಮನಸ್ಸನ್ನು ನಿಮಗಿಷ್ಟವಿರುವ ಇತರ ವಿಷಯದಲ್ಲಿ ತೊಡಗಿಸಿ... ಸ್ವಾನುಭವದಿಂದ ಹೇಳುತ್ತಿದ್ದೇನೆ... ಅಕ್ಕ ತಮ್ಮನಿಗೆ ಕಳಕಳಿಯಿಂದ ಹೇಳುತ್ತಿದ್ದಾಳೆಂದುಕೊಳ್ಳಿ!! ನೀವು ಅವನಿಗೆ ಸಹಾಯ ಮಾಡಿದ್ದು ವ್ಯರ್ಥವಾಗುವುದಿಲ್ಲ... ಒಳ್ಳೆಯ ಮನಸ್ಸಿನಿಂದ ಮಾಡಿದ್ದು ನಿಮಗೇ ತಿರುಗಿ ಬರುತ್ತದೆ. ನಿಮಗೆ ಉಜ್ವಲ ಭವಿಷ್ಯವಿದೆ. ಸಮಯ, ಆಯುಷ್ಯವನ್ನು ವ್ಯರ್ಥ ಮಾಡದಿರಿ.      

          ಕೆಲವೊಂದು ಬಂಧನ, ಸಂಬಂಧಗಳು ಹೀಗೆಯೇ. ನಮಗೊತ್ತಿಲ್ಲದೆ ಅದರ ಸುಳಿಯೊಳಗೆ ಸಿಕ್ಕಿಕೊಂಡಿರುತ್ತೇವೆ.. ಎಷ್ಟು ಪ್ರಯತ್ನ ಪಟ್ಟರೂ ಹೊರಬರಲಾಗುವುದಿಲ್ಲ, ಅಲ್ಲವೆ? ಇಂತಹ ಪಾಶದಲ್ಲಿ ಸಿಕ್ಕ ನಮಗೆ ನಮ್ಮನ್ನು ಕೂಡ ಮತ್ತೊಬ್ಬರು ಹೀಗೆಯೇ ಹಚ್ಚಿಕೊಳ್ಳಬಹುದೆಂಬ ವಿಷಯ ಸಹ ಗೊತ್ತಾಗದೇ ಹೋದಿತು! ಮನು, ಸ್ವಲ್ಪ ನಿಮ್ಮ ಸುತ್ತಲೂ ಗಮನಿಸಿ... ನಿಮ್ಮನ್ನು ಕೂಡ ಯಾರಾದರು ಉತ್ಕೃಷ್ಟವಾಗಿ ಹಚ್ಚಿಕೊಂಡಿರಬಹುದು...

     ಉಪದೇಶ ಕೊಡುವುದು ಬಹಳ ಸುಲಭ... ಅದನ್ನು ಬೇರೊಬ್ಬರು ಪಾಲಿಸಬೇಕಷ್ಟೇ! ಈ ಸೂತ್ರಧಾರಿಯು ನಮ್ಮನ್ನು ತನ್ನಿಷ್ಟ ಬಂದಂತೆ ಕುಣಿಸುತ್ತಾನೆ... ಇಲ್ಲಿ ನಿಮ್ಮ ಮಿತ್ರನದು ಕೂಡ ಈ ಸೂತ್ರಧಾರಿಯು ಆಡಿಸುವ ಒಂದು ಪಾತ್ರವಷ್ಟೇ... ನಿಮಗೆ ಅವನ ಮೇಲಿರುವ ಭಾವನೆ ಅವನಿಗೂ ಇರಬೇಕಿಂದಿಲ್ಲವಲ್ಲ..."ದೇವನ ಆಟ ಬಲ್ಲವರಾರೋ... ಆತನ ಎದುರು ನಿಲ್ಲವವರಾರೋ.?????...."

       ಬಹುಶಃ ಇಲ್ಲಿರುವ ಚರಾಚರಗಳಲ್ಲಿ ಸಸ್ತನಿಗಳು ಮಾತ್ರ ಭಾವನೆಗಳಿಂದ ಬಳಲುತ್ತವೆ. ಎಷ್ಟೋ ಸಲ ತನ್ನ ಮರಿ ಅಥವಾ ಜೊತೆಗಾರನನ್ನು ಕಳಕೊಂಡ ಪ್ರಾಣಿಗಳು ದುಃಖ ಪಡುವುದು ಸುದ್ದಿ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುತ್ತವೆ. ಅಂದ ಮೇಲೆ ಮಾನವನ ಪಾಡು ಹೇಗಿರಬಹುದಲ್ಲವೇ? ಮನಸ್ಸು, ಭಾವನೆ, ಪ್ರೀತಿ, ದ್ವೇಷ, ಮುಂತಾದವುಗಳು ಮಾನವನ ಅನಾರೋಗ್ಯಕ್ಕೆ ಮುಖ್ಯ ಕಾರಣವೆಂದರೆ ಅದು ಖಂಡಿತ ಉತ್ಪ್ರೇಕ್ಷೆಯಾಗುವುದಿಲ್ಲ.

      ಕೊನೆಗೊಂದು ಸುಲಭದ ಉಪಾಯ ಹೇಳುತ್ತೇನೆ.. ಕೇಳುವವರಾಗಿ!!! ಬ್ಲಾಗ್ ಬರೆಯಲು ಪ್ರಾರಂಭಿಸಿ. ಸಹ ಬ್ಲಾಗಿಗರ ಅನುಭವಗಳನ್ನು ಓದಿ... ಹೊಸ ಪ್ರಪಂಚದ ಅಂದ ಚಂದ ನಿಮ್ಮ ಮಿದುಳಿಗೆ ಉತ್ತಮ ಚಿಂತನೆಕೊಡದಿದ್ದರೆ.. ಕೇಳಿ!!! ಬ್ಲಾಗಿನಲ್ಲಿ ಬರೆದು ಮನಸ್ಸು ತೋಡಿಕೊಳ್ಳಿ.. ಹಗುರಮಾಡಿಕೊಳ್ಳಿ... ಆದರೆ ಯಾರ ಅನುಕಂಪ ಅಥವಾ ಕಮೆಂಟುಗಳನ್ನು ನಿರೀಕ್ಷಿಸದಿರಿ... ನಾಲ್ಕು ಗೋಡೆಯ ಮಧ್ಯದಲ್ಲಿ ಬದುಕುತ್ತಿದ್ದ ನನ್ನ ಬದುಕಿಗೆ (ಹಾಗೆ ನೋಡಿದರೆ ಬಹುಶಃ ಅನೇಕ ಮಹಿಳೆಯರಿಗೂ) ಬ್ಲಾಗ್ ಹೊಸ  ಆಯಾಮ ಕೊಟ್ಟಿದೆ. ಕೂಪ ಮಂಡೂಕದಂತಿರುವ ಬದುಕಿನಲ್ಲಿ ಹೊಸ ಬಣ್ಣಗಳನ್ನು ತುಂಬಿದೆ... ಮುಂಚಿನಂತೆ ನಿಮ್ಮ ಮಿತ್ರನನ್ನು ಪ್ರೀತಿಸಿ.. ಅಲ್ಪ ಸ್ವಲ್ಪ ಸಹಾಯ ಮಾಡಿ... ಆದರೆ ವಿಪರೀತ ತ್ಯಾಗ ಮಾಡಲು ಹೋಗದಿರಿ.. ನೀವೇ ನಿಮ್ಮ ಗೆಳೆಯನು ದಾರಿ ತಪ್ಪಲು ಕಾರಣರಾದಿರಿ!  ನಿಮಗೆ ಗೊತ್ತೇ??? ತಾಯಿ ಯಾವಾಗಲು ತನ್ನ ಮಕ್ಕಳನ್ನು ಉತ್ಕೃಷ್ಟವಾಗಿ ಹಚ್ಚಿಕೊಳ್ಳುತ್ತಾಳೆ...ಆದರೆ ಅವರು ಕೇಳಿದನ್ನೆಲ್ಲಾ ಕೊಡುವುದಿಲ್ಲ, ಯಾಕೆ... ಅಂತ ಹೇಳಿ? ಮಕ್ಕಳು ಹಾಳಾಗಬಾರದಲ್ಲಾ.. .ಅದರಿಂದ ಇನ್ನು ಮುಂದೆ ಎಚ್ಚರದಿಂದ ವರ್ತಿಸಿರಿ. ಒಳ್ಳೆಯದಾಗಲಿ ಎಂದು ಹಾರೈಸುವೆ ಮನು!
                               *************************************
                        ಸಂಪದಿಗರೇ,....ನಿಮ್ಮ ಸಲಹೆಗಳು ಅಮೂಲ್ಯ... ದಯಮಾಡಿ ಇನ್ನು ಮುಂದೆ ಇಂತಹ ಪತ್ರವನ್ನು ಬರೆದರೆ ಅವರನ್ನು ನಿರಾಶೆಗೊಳಿಸದಿರಿ... ಇದು ಸಾಹಿತ್ಯಕ್ಕಾಗಿ, ಕನ್ನಡಕ್ಕಾಗಿ ಇರುವ ವೇದಿಕೆಯಾದರೂ... ಮನುಷ್ಯನು ಸಾಹಿತ್ಯವನ್ನು ಭಾವ ಹೊಮ್ಮಿಸಲಿಕ್ಕಾಗಿಯೇ ತಾನೆ ಬರೆಯುವುದು... ಆದುದರಿಂದ   ತಾವೆಲ್ಲರೂ ತಮ್ಮ ಅಮೂಲ್ಯ ಸಲಹೆ ಗಳಿಂದ ಜೀವನದಲ್ಲಿ ನಿರಾಶೆಗೊಂಡವರಲ್ಲಿ ಮತ್ತೆ ಉತ್ಸಾಹ ತುಂಬಿಸಿ  ಎಂದು  ಪ್ರಾರ್ಥಿಸುತ್ತೇನೆ.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...