ನಿನ್ನೆ "The Times of India"ದಲ್ಲಿ, ಮಾತನಾಡುವ ಮರದಲ್ಲಿ ಬರುವ ಓಶೋನವರ ಬರಹ ಓದಿದೆ. ನಮ್ಮ ಆಧುನಿಕ ಜೀವನ ಶೈಲಿಗೆ ಹೇಳಿಸಿದ ಬರಹ ಎಂದು ಅನಿಸಿತು. ಆ ನಾಲ್ಕು ಮುದ್ರೆಗಳು ನಮ್ಮ ಹುಚ್ಚು ಮನಸಿಗೆ ಓಟಕ್ಕೆ ಕಡಿವಾಣ ಹಾಕಿತು ಎಂದು ಅನಿಸಿ, ಎಲ್ಲರಿಗೂ ತಿಳಿಸುವ ಎಂದು ಈ ನನ್ನ ಮೊದಲ ಬ್ಲಾಗ್ ಪ್ರಾರಂಭಿಸುತಿದ್ದೇನೆ.
ಅಂತಿಮವಾಗಿ ಮುಕ್ತಿ ಪಡೆಯಲು ಮಾನವನು ನಾಲ್ಕು ದ್ವಾರಗಳನ್ನು ಅವುಗಳ ಬೀಗಗಳನ್ನು ಮುರಿದು ದಾಟಬೇಕು. ಮೊದಲನೇ ಮುದ್ರೆ ಕರ್ಮ ಮುದ್ರೆ, ನಮ್ಮ ಹೊರ ಕವಚ. ನಾವು ಯಾವ ಕೆಲಸ ಮಾಡುತ್ತಿದ್ದೇವೆಯೋ ಅದು ನಮಗೆ ಚೆನ್ನಾಗಿ ತಿಳಿದಿರಬೇಕು. ಕೋಪವೋ , ತಾಪವೋ ಸುಖವೋ ದುಃಖವೋ ಆದು ನಮಗೆ ಸರಿಯಾಗಿ ತಿಳಿದರೆ ನಾವು ಕೆಟ್ಟದನ್ನು ಬಿಡಬಹುದು. ನಮಗೆ ಚೆನ್ನಾಗಿ ತಿಳಿಯದ ವಿಷಯಗಳು ನಮ್ಮ ಸುತ್ತಲೇ ತಿರುಗುತ್ತದೆ. ಎರಡನೇದು ಜ್ಞಾನ ಮುದ್ರೆ, ಸ್ವಲ್ಪ ಕೆಳಭಾಗದಲ್ಲಿರುವುದು. ನಾವು ಮಾಡುವ ಕರ್ಮ ಎಲ್ಲರ ಕಣ್ಣಿಗೆ ಕಾಣುತ್ತದೆ. ಆದರೆ ನಮ್ಮ ಭಾವನೆ ಯಾರಿಗೂ ಕಾಣುವುದಿಲ್ಲ! ನಾವು ಯಾವಾಗಲೂ ನಮಗೆ ಗೊತ್ತಿರುವುದನ್ನೇ ನಂಬಬೇಕು. ಉದಾಹರೆಣೆಗೆ ಯಾರಾದರು ನಮಗೆ ದೇವರಿರುವನೇ ಎಂದು ಕೇಳಿದರೆ ನಾವು ನಮಗೆ ನಿಜವಾಗಿ ಗೊತ್ತಿದ್ದ ವಿಷಯ ಹೇಳಬೇಕು. ನಮ್ಮ ಉತ್ತರದಲ್ಲಿ ಯಾವಾಗಲು ಪ್ರಾಮಾಣಿಕತನವಿರಬೇಕು. ಈ ಭಾವನೆ ಬೆಳೆಸಿಕೊಂಡಾಗ , ನಮಗೆ ನಿಜವಾದ ಸ್ವಾತಂತ್ರ್ಯದ ಅನುಭವವಾಗುವುದು.
ಸರಿ ಮುರನೇ ಮುದ್ರೆ ಸಮಯ ಮುದ್ರೆ. ನಾವೂ ಈಗ ಕಾಲದಲ್ಲಿದ್ದೇವೆ. ಭೂತ ಕಾಲ ಕಳೆದಿದೆ, ಭವಿಷತ್ ಕಾಲ ನಮಗೆ ತಿಳಿದಿಲ್ಲ. ಭೂತ, ಭವಿಷ್ಯಯದ ಬಗ್ಗೆ ನಾವು ಚಿಂತಿಸಿದರೆ ಇಲ್ಲಾ ನಾವು ನೆನಪಿನಲ್ಲಿರುತ್ತೇವೆ ಅಥವಾ ಸ್ವಪ್ನದಲ್ಲಿರುತ್ತೇವೆ. ಇವೆರಡರನ್ನು ಒಡೆದರೆ ನಾವು ಮುರನೇ ಕದ ತೆರದ ಹಾಗೆ.
ನಾಲ್ಕನೇ ಬಾಗಿಲು, ಮಹಾಮುದ್ರೆ. ಪವಿತ್ರವಾದ ನಮ್ಮ ಬಹಳ ಒಳಗಿನ ಭಾಗ. ಚಂಡಮಾರುತದ ಕೇಂದ್ರ. ಆಕಾಶದ ಹಾಗೆ ಖಾಲಿ ಜಾಗವಿದೆ ಈ ಒಳಭಾಗದಲ್ಲಿ. ಇದಕ್ಕೆ ಕಾಲ, ಜ್ಞಾನ, ಕರ್ಮದ ಪದರಗಳು. ಈ ಪದರಗಳನ್ನು ಒಡೆದಾಗ ನಾವು ಮುಕ್ತಿಯನ್ನು ಪಡೆಯಬಲ್ಲಿವು!
Thursday 16 August 2007
Subscribe to:
Posts (Atom)